ಮನೆ ಕಾನೂನು ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್ ಗೆ ಜಾಮೀನು ಮಂಜೂರು

ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್ ಗೆ ಜಾಮೀನು ಮಂಜೂರು

0

ನವದೆಹಲಿ(Newdelhi): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ 50,000 ರೂಪಾಯಿಗಳ ಬಾಂಡ್ ಆಧಾರದ ಮೇಲೆ ಮಧ್ಯಂತರ ಜಾಮೀನು ಮಂಜೂರಾಗಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ಜಾಮೀನು ಅರ್ಜಿಯ ಬಗ್ಗೆ ಇಡಿಯಿಂದ ಪ್ರತಿಕ್ರಿಯೆ ಕೇಳಿದರು. ಇಡಿ ಪ್ರತಿಕ್ರಿಯೆ ನೀಡುವವರೆಗೆ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇರಲಿದೆ. ₹200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಸೋಮವಾರ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರಾಗಿದ್ದರು.

ಇತ್ತೀಚೆಗೆ, ಜಾರಿ ನಿರ್ದೇಶನಾಲಯವು (ಇಡಿ) ಪ್ರಕರಣದಲ್ಲಿ ತನ್ನ ಎರಡನೇ ಪೂರಕ ಚಾರ್ಜ್ ಶೀಟ್ ಸಲ್ಲಿಸಿ ಜಾಕ್ವೆಲಿನ್‌ ಅವರನ್ನು ಆರೋಪಿ ಎಂದು ಹೆಸರಿಸಿತ್ತು. ಕಳೆದ ಡಿಸೆಂಬರ್‌ನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಇಡಿ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿತ್ತು. ನಂತರ, ಫೆಬ್ರುವರಿಯಲ್ಲಿ ಚಂದ್ರಶೇಖರ್ ಅವರನ್ನು ಜಾಕ್ವೆಲಿನ್‌ ಫೆರ್ನಾಂಡಿಸ್‌ಗೆ ಪರಿಚಯಿಸಿದ್ದ ಪಿಂಕಿ ಇರಾನಿ ಎಂಬುವವರ ವಿರುದ್ಧವೂ ಪೂರಕ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಹಿಂದಿನ ಲೇಖನಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸ್ವಾಗತ
ಮುಂದಿನ ಲೇಖನಭಾರತದ ಅಟಾರ್ನಿ ಜನರಲ್ ಹುದ್ದೆ ನಿರಾಕರಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ