ಮನೆ ರಾಜಕೀಯ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಿದ್ದ ಹಣ ದಂಧಕೋರರಿಗೆ ತಲುಪಿದೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ

ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಿದ್ದ ಹಣ ದಂಧಕೋರರಿಗೆ ತಲುಪಿದೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆರೋಪ

0

ಬೆಂಗಳೂರು : ಬಡ ವಾಲ್ಮೀಕಿ ಸಮುದಾಯವರಿಗೆ ಸೇರಬೇಕಾಗಿದ್ದ ಹಣವನ್ನು ಹವಾಲಾ ದಂಧೆಕೋರರಿಗೆ ಕಾಂಗ್ರೆಸ್ ಸರ್ಕಾರ ತಲುಪಿಸಿದೆ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ.

Join Our Whatsapp Group

ಈ ಕುರಿತು ಪೋಸ್ಟ್ ಮಾಡಿರುವ ಬಿಜೆಪಿ, ಬಡ ವಾಲ್ಮೀಕಿ ಸಮುದಾಯದವರಿಗೆ ಸೇರಬೇಕಾಗಿದ್ದ ಹಣವನ್ನು ಹವಾಲಾ ದಂಧೆಕೋರರಿಗೆ ತಲುಪಿಸಿದೆ ಕಾಂಗ್ರೆಸ್ ಸರ್ಕಾರ. ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಹವಾಲಾ ದಂಧೆಕೋರರು ಭಾಗಿಯಾಗಿದ್ದಾರೆಂದರೆ, ಇದೊಂದು ವ್ಯವಸ್ಥಿತ ರೀತಿಯಲ್ಲಿ ನಡೆದ ಹಗಲುದರೋಡೆ ಎಂಬುದಂತೂ ಸಾಬೀತಾಗಿದೆ ಎಂದು ಕಿಡಿಕಾರಿದೆ.

ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಮಾರ್ಗದರ್ಶನವಿಲ್ಲದೆ ಇಂತಹ ವ್ಯವಸ್ಥಿತ ದರೋಡೆ ರಾಜ್ಯದಲ್ಲಿ ನಡೆಯಲು ಸಾಧ್ಯವೇ ಇಲ್ಲ, ನಿಜಕ್ಕೂ ನಿಮಗೆ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ನೀಡಬೇಕೆಂಬ ಕಾಳಜಿ ಇದ್ದರೆ, ಮೊದಲು ನಿಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದೆ.

ಹಿಂದಿನ ಲೇಖನಕೋರ್ಟ್‌ ವಾರೆಂಟ್ ಜಾರಿ ಪೊಲೀಸರ ಕರ್ತವ್ಯ: ಆರೋಪಿ ನಾಪತ್ತೆ ಎಂಬ ಹೇಳಿಕೆ ಅಸಮ್ಮತ- ಅಲಹಾಬಾದ್ ಹೈಕೋರ್ಟ್‌
ಮುಂದಿನ ಲೇಖನಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಜಾಮೀನು