ಮನೆ ಹವಮಾನ ಜೂನ್ 4 ರಂದು ಕೇರಳಕ್ಕೆ ಅಪ್ಪಳಿಸಲಿರುವ ಮುಂಗಾರು

ಜೂನ್ 4 ರಂದು ಕೇರಳಕ್ಕೆ ಅಪ್ಪಳಿಸಲಿರುವ ಮುಂಗಾರು

0

ನವದೆಹಲಿ: ಜೂನ್ 4 ರಂದು ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ.

Join Our Whatsapp Group

ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆಯೂ ಇರುತ್ತದೆ.

ಈ ವರ್ಷ ಕೇರಳದ ಮೇಲೆ ನೈರುತ್ಯ ಮುಂಗಾರು ಪ್ರಾರಂಭವಾಗುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ಈ ಬಾರಿ 4 ದಿನ ವಿಳಂಬವಾಗಿ ಜೂನ್ 4 ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಾನ್ಸೂನ್ ಕಳೆದ ವರ್ಷ ಮೇ 29 ರಂದು, 2021 ರಲ್ಲಿ ಜೂನ್ 3 ಮತ್ತು 2020 ರಲ್ಲಿ ಜೂನ್ 1 ರಂದು ದೇವರ ನಾಡು ದಕ್ಷಿಣ ರಾಜ್ಯ ಪ್ರವೇಶಿಸಿತ್ತು.

ಹಿಂದಿನ ಲೇಖನಬಾಜಿ ಕಟ್ಟಿ ಅಥವಾ ಕಟ್ಟದೇ ಆಡಿದರೂ ರಮ್ಮಿ ಜೂಜಾಟವಲ್ಲ: ಕರ್ನಾಟಕ ಹೈಕೋರ್ಟ್‌
ಮುಂದಿನ ಲೇಖನಅಕ್ರಮ ಪಟಾಕಿ ಘಟಕದಲ್ಲಿ ಸ್ಫೋಟ: ಏಳು ಮಂದಿ ಸಾವು