ಮೂಡುಬಿದಿರೆ: ಸ್ನಾನದ ಕೋಣೆಯ ಗ್ಯಾಸ್ ಗೀಸರ್ ನ ರಾಸಾಯನಿಕ ಹೊರಚೆಲ್ಲಿ ಯುವಕ ಉಸಿರುಗಟ್ಟಿ ಮೃತಪಟ್ಟ ಘಟನೆ ರವಿವಾರ ರಾತ್ರಿ ಮೂಡುಬಿದಿರೆಯ ಕೋಟೆಬಾಗಿಲಿನ ವಸತಿ ಸಂಕೀರ್ಣವೊಂದರಲ್ಲಿ ಸಂಭವಿಸಿದೆ.
ಕೋಟೆಬಾಗಿಲಿನ ದಿ. ಅನ್ಸಾರ್ ಅವರ ಪುತ್ರ ಶಾರಿಕ್ (18) ಮೃತಪಟ್ಟ ಯುವಕ.
ಸ್ನಾನಕ್ಕೆಂದು ತೆರಳಿದಾತ ಬಹಳ ಹೊತ್ತಾದರೂ ಹೊರ ಬಾರದಿರುವುದನ್ನು ಗಮನಿಸಿದ ಆತನ ಸಹೋದರ ಹೋಗಿ ಪರಿಶೀಲಿಸಿದಾಗ ಶಾರಿಕ್ ಸಾವನ್ನಪ್ಪಿರುವುದು ಗೊತ್ತಾಗಿದೆ.
ಶಾರಿಕ್ ಯಾವಾಗಲೂ ಸ್ನಾನದ ಕೋಣೆಯಲ್ಲಿ ಬಹಳ ಹೊತ್ತು ಕಳೆಯುವುದು ಸಾಮಾನ್ಯವಾಗಿದ್ದ ಕಾರಣ ಘಟನೆಯ ಬಗ್ಗೆ ಮನೆಯವರ ಮೊದಲು ಅರಿವಾಗಲಿಲ್ಲ ಎನ್ನಲಾಗಿದೆ.
ಸ್ನಾನದ ಕೋಣೆ ಬಂದ್ ಆಗಿದ್ದು ಗಾಳಿಯಾಡದ ಸ್ಥಿತಿ ಇದ್ದ ಕಾರಣ ಗೀಸರ್ ನ ರಾಸಾಯನಿಕ ಹರಡಿದಾಗ ಶಾರಿಕ್ ಗೆ ಹೊರಬರಲಾಗಲಿಲ್ಲ ಎನ್ನಲಾಗಿದೆ.
ಶಾರಿಕ್ ಪ್ರಥಮ ಪದವಿ ವಿದ್ಯಾರ್ಥಿಯಾಗಿದ್ದು ಕಲಿಕೆಯಲ್ಲಿ ಮುಂದಿದ್ದ ಎಂದು ತಿಳಿದು ಬಂದಿದೆ.
Saval TV on YouTube