ಭೋರ್ಗರೆದು ಹರಿಯುತ್ತಿದ್ದ ನದಿಯನ್ನು ದಾಟುವಾಗ ಕತ್ತಲಲ್ಲಿ ನದಿಯಲ್ಲಿ ಮುಳುಗಿ ಚೀನಾದ ಹಲವು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಚೀನಾದ ಬ್ಲಾಗರ್ ಗಳು, ಸಂಶೋಧಕರು, ಮೈನ್ ಲ್ಯಾಂಡ್ ನ ಸಂಶೋಧಕರನ್ನು ಈ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದು, ಅವರು ತಮ್ಮ ಹೆಸರನ್ನು ಭದ್ರತಾ ಕಾರಣದಿಂದ ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ.
ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಜೀವ ಕಳೆದುಕೊಂಡಿದ್ದರೆ, ಚೀನಾ ತನ್ನ ಕಡೆಯ ಐವರು ಯೋಧರು, ಸೇನಾ ಅಧಿಕಾರಿಗಳು ಭಾರತೀಯ ಯೋಧರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿಕೊಂಡಿತ್ತು. ಆದರೆ ವಾಸ್ತವದಲ್ಲಿ ಇದಕ್ಕಿಂತಲೂ ಹೆಚ್ಚಿನ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದ್ದ ಬೆನ್ನಲ್ಲೇ ಈಗ ಹೊಸ ವರದಿಯನ್ನು ಆಸ್ಟ್ರೇಲಿಯಾದ ಪತ್ರಿಕೆ ಪ್ರಕಟಿಸಿದ್ದು, ನಿಜವಾಗಿಯೂ ಏನಾಯಿತು ಎಂಬುದನ್ನು ಬೀಜಿಂಗ್ ಮುಚ್ಚಿಡುತ್ತಿದೆ ಎಂದು ಹೇಳಿದೆ.