ಮನೆ ಅಪರಾಧ ನಕಲಿ ಇ-ಮೇಲ್ ಬಳಸಿ 2 ಕೋಟಿಗೂ ಹೆಚ್ಚು ಹಣ ವಂಚನೆ: ಬಳ್ಳಾರಿ ಪೊಲೀಸರಿಂದ ಆರೋಪಿ ಬಂಧನ

ನಕಲಿ ಇ-ಮೇಲ್ ಬಳಸಿ 2 ಕೋಟಿಗೂ ಹೆಚ್ಚು ಹಣ ವಂಚನೆ: ಬಳ್ಳಾರಿ ಪೊಲೀಸರಿಂದ ಆರೋಪಿ ಬಂಧನ

0

ಬಳ್ಳಾರಿ: ನಕಲಿ ಈ ಮೇಲ್ ಬಳಸಿ 2 ಕೋಟಿ 11 ಲಕ್ಷದ 50 ಸಾವಿರ ರೂಪಾಯಿ ಹಣವನ್ನು ವಂಚಿಸಿದ್ದ ಆರೋಪಿಯನ್ನು ಹಣದ ಸಮೇತ ಅರೆಸ್ಟ್ ಮಾಡಲಾಗಿದೆ. ಬಳ್ಳಾರಿ ಪೊಲೀಸರು ಮಧ್ಯಪ್ರದೇಶಕ್ಕೆ ಹೋಗಿ ಹಣದ ಸಮೇತ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

Join Our Whatsapp Group

ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಎಂಬಾತ ಕಲ್ಲಿದ್ದಲು ಸಪ್ಲೆ ಮಾಡುವ ಕಂಪನಿಗೆ 2 ಕೋಟಿ 11 ಲಕ್ಷ ವಂಚಿಸಿದ್ದಾನೆ. ಮಧ್ಯಪ್ರದೇಶದ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿ ಕಲ್ಲಿದ್ದಲು ಖರೀದಿಗೆ ಬಳ್ಳಾರಿಯ ಹಿಂದುಸ್ತಾನ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಗೆ ಹಣ ವರ್ಗಾವಣೆ ಮಾಡಿತ್ತು. ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದಿದ್ದ ಖದೀಮ ಅಜಯ್ ಕುಮಾರ್ ಜೈಸ್ವಾಲ್, ಅಗರ್ವಾಲ್ ಕಂಪನಿಯ ನಕಲಿ ಇ ಮೇಲೆ ಕ್ರಿಯೇಟ್ ಮಾಡಿ, ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಂಜ್ ಆಗಿದೆ ಅಂತಾ ಹಿಂದುಸ್ತಾನ್ ಕಂಪನಿಗೆ ಮೇಲ್ ಕಳಿಸಿ ವಂಚಿಸಿದ್ದಾನೆ.

ಇನ್ನು ಫೇಕ್ ಮೇಲ್ ಅನ್ನು ನಂಬಿದ ಹಿಂದುಸ್ತಾನ್ ಕಂಪನಿ ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್ ಗೆ ಹಣ ಹಾಕಿದೆ. ಮಧ್ಯಪ್ರದೇಶ ಮೂಲದ ಅಜಯ್ ಕುಮಾರ ಜೈಸ್ವಾಲ್ ನ ಅಕೌಂಟ್‌ಗೆ ಹಣ ಹಾಕಿದ್ದಾರೆ. ತನ್ನ ಖಾತೆಗೆ ಬಂದ 2 ಕೋಟಿ 11 ಲಕ್ಷ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಆರೋಪಿ ಹಣವನ್ನು ಡ್ರಾ ಮಾಡಿಕೊಂಡಿದ್ದ. ಹಿಂದುಸ್ತಾನ್ ಕಂಪನಿ, ಅರ್ಗವಾಲ್ ಕಂಪನಿಗೆ ಕಲ್ಲಿದ್ದಲು ಕಳಿಸಿ ಎಂದಾಗ ಹಣ ವಾಪಸ್ ಹಾಕಿದ್ದೇವೆ ಎಂದಿದ್ದಾರೆ. ಸೆಪ್ಟೆಂಬರ್ 3ನೇ ತಾರೀಖು ಹಣ ಹಾಕಲಾಗಿದೆ ಅಂತಾ ಹಿಂದುಸ್ತಾನ್ ಕಂಪನಿ ತಿಳಿಸಿದೆ. ಈ ಮೂಲಕ ವಂಚನೆ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದುಸ್ತಾನ್ ಕಂಪನಿ ದೂರು ದಾಖಲಿಸಿತ್ತು. ಕೂಡಲೇ ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿ.ಎಸ್.ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಲಾಗಿದ್ದು ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯಿಂದ 1 ಕೋಟಿ, 21 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ಹಣವನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ.