ಮನೆ ರಾಜಕೀಯ ಸಚಿವರ ವಿರುದ್ಧ 20ಕ್ಕೂ ಹೆಚ್ಚು ಶಾಸಕರಿಂದ ಸಿಎಂಗೆ ಪತ್ರ: ಬಿಜೆಪಿ ಎಂಎಲ್​ಸಿ ಎನ್​.ರವಿಕುಮಾರ್​​

ಸಚಿವರ ವಿರುದ್ಧ 20ಕ್ಕೂ ಹೆಚ್ಚು ಶಾಸಕರಿಂದ ಸಿಎಂಗೆ ಪತ್ರ: ಬಿಜೆಪಿ ಎಂಎಲ್​ಸಿ ಎನ್​.ರವಿಕುಮಾರ್​​

0

ಬೆಂಗಳೂರು: ಸಚಿವರ ಭೇಟಿಗೆ ಸಾಧ್ಯವಾಗುತ್ತಿಲ್ಲ ಎಂದು 20ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ನಮ್ಮ ಪರಿಸ್ಥಿತಿ ಹೀಗಾದರೇ ಜನರ ಸ್ಥಿತಿ ಹೇಗೆ? ಎಂದು ಬಿಜೆಪಿ ಎಂಎಲ್​ಸಿ ಎನ್​. ರವಿಕುಮಾರ್​​ ಪ್ರಶ್ನಿಸಿದ್ದಾರೆ.

Join Our Whatsapp Group

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಧಿಗಳೊಂದಿಗೆ ಮಾತನಾಡಿದ ಅವರು ಸಚಿವರೇ ಹೀಗೆ ಆದರೆ, ಶಾಸಕರೇ ಇಷ್ಟು ಬೇಸರ ಮಾಡಿಕೊಂಡರೆ, ಜನಸಾಮಾನ್ಯರು ಎಷ್ಟು ಬೇಸರ ಗೊಂಡಿರಬಹುದು? ಎಂದು ಕೇಳಿದರು.

ರಾಜ್ಯ ಕಾಂಗ್ರೆಸ್​​ ಸರ್ಕಾರ ಗ್ಯಾರಂಟಿಯೊಳಗೆ ಮುಳುಗಿ ಹೋಗಿದೆ‌. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಿಮ್ಮ ಗ್ಯಾರಂಟಿ ಯೋಜನೆ ಹೊರತುಪಡಿಸಿ ರೈತ ಸಮಸ್ಯೆ, ಅಂಗನವಾಡಿ ಕಾರ್ಯಕರ್ತರ ಸಮಸ್ಯೆ ಬಗೆಹರಿಸಿ ಎಂದು ವಾಗ್ದಾಳಿ ನಡೆಸಿದರು.

ಉಡುಪಿಯಲ್ಲಿ ಶೌಚಾಲಯದಲ್ಲಿ ವಿದ್ಯಾರ್ಥಿನಿಯರು ಮೊಬೈಲ್ ಇರಿಸಿದ್ದ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕೂಲಂಕುಷ ತನಿಖೆ ಆಗಬೇಕು. ಯಾರು ವಿಡಿಯೋ ಮಾಡಿದರು, ಅದನ್ನು ಯಾತಕ್ಕೆ ಬಳಸಿಕೊಳ್ಳಬಹುದು ಗೊತ್ತಿಲ್ಲ. ಆದರೆ ವೀಡಿಯೋ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಆಗಬೇಕು. ವೈದ್ಯಕೀಯ ಶಿಕ್ಷಣ ಸಚಿವರು ಈ‌ ಬಗ್ಗೆ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು.