ಮನೆ ಅಪರಾಧ ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ

ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ

0

ಮೈಸೂರು:  ಕೌಟುಂಬಿಕ ಕಲಹ ಹಿನ್ನಲೆ, ತಾಯಿ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ   ಟಿ.ನರಸೀಪುರ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

ನಂದಿನಿ(35) ಹಾಗೂ ಸಿಂಚನ(9)  ಆತ್ಮಹತ್ಯೆಗೆ ಶರಣಾದವರು.  ತಾಯಿ ಮಗಳ ಸಾವಿಗೆ ಕೌಟುಂಬಿಕ ಕಲಹವೆಂದೇ ಹೇಳಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಕಳೆದ ಹಲವು ದಿನಗಳಿಂದ ನಂದಿನಿ ತನ್ನ ಪತಿಯಿಂದ  ದೂರವಿದ್ದರು. ಈ ವಿಚಾರದಲ್ಲಿ ಆಗಾಗ ಗಲಾಟೆಗಳಾಗಿತ್ತು. ಎಂದು ಹೇಳಲಾಗಿದೆ.

ಈ ಕುರಿತು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.