ಮನೆ ರಾಜ್ಯ ಕೆರೆಯಲ್ಲಿ ಮುಳುಗಿ ತಾಯಿ, ಮಗ ಸಾವು

ಕೆರೆಯಲ್ಲಿ ಮುಳುಗಿ ತಾಯಿ, ಮಗ ಸಾವು

0

ತುಮಕೂರು: ತಾಯಿ ಮತ್ತು ಮಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಗಲವಾಡಿ ಗ್ರಾಮದಲ್ಲಿ ನಡೆದಿದೆ.

ಮಂಗಳಗೌರಮ್ಮ (40) ಮತ್ತು ಈಕೆಯ ಮಗ ರುದ್ರೇಶ್ (13) ಮೃತರು.

ಅನಾರೋಗ್ಯ ಹಿನ್ನೆಲೆ ರುದ್ರೇಶ್ ಶಾಲೆಗೆ ಹೋಗದೆ ಮನೆಯಲ್ಲಿರುತ್ತಿದ್ದನು. ಈ ವಿಚಾರವಾಗಿ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಅದರಂತೆ ಇಂದು ಕೂಡ ಜಗಳ ನಡೆದಿದ್ದು, ಬಳಿಕ ಕೆರೆಯತ್ತ ರುದ್ರೇಶ್ ಹೋಗಿ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಮಗನ ಹಿಂದೆ ಹೋಗಿ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.