ಮನೆ ಅಪರಾಧ ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಹತ್ಯೆಯಾದ ಅತ್ತೆ

ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಹತ್ಯೆಯಾದ ಅತ್ತೆ

0

ಹಾಸನ : ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಅತ್ತೆ ಹತ್ಯೆಯಾದ ಘಟನೆ ಅರಕಲಗೂಡಿನ ರಾಮನಾಥಪುರದಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಫೈರೋಜಾಅಹದ್ (55) ಎಂದು ಗುರುತಿಸಲಾಗಿದೆ.

ರಸೂಲ್ ಕೊಲೆಗೈದ ಆರೋಪಿಯಾಗಿದ್ದಾನೆ. ಈತ ಪತ್ನಿಗೆ ನೀಡುತ್ತಿದ್ದ ಕಿರಿಕುಳದಿಂದ ಬೇಸತ್ತ ಅತ್ತೆ, ತನ್ನ ಮಗಳನ್ನು ತವರು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇದರಿಂದ ಕೋಪಗೊಂಡ ಅಳಿಯ ಹಿಂಬಾಲಿಸಿಕೊಂಡು ಬಂದು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಮಗಳ ರಕ್ಷಣೆಗೆ ಬಂದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಪತ್ನಿ ಸಮೀನಾ ಹಾಗೂ ಆಕೆಯ ಅಕ್ಕ ಸುಮಯ್ಯತಾಜಾ ಮೇಲೂ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.