ಮನೆ ರಾಷ್ಟ್ರೀಯ ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ: ಮಕ್ಕಳ ಸಾವು

ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ: ಮಕ್ಕಳ ಸಾವು

0

ಜೈಪುರ: ಗಂಡನ ಜೊತೆ  ಜಗಳವಾಡಿ ಮಕ್ಕಳೊಂದಿಗೆ ತಾಯಿಯೊಬ್ಬಳು ಕೆರೆಗೆ ಹಾರಿದ್ದು, ಇಬ್ಬರು ಮಕ್ಕಳು ಮೃತಪಟ್ಟು ತಾಯಿ ಬದುಕುಳಿದಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ.

Join Our Whatsapp Group

ಸೋಹ್ನಿ ಬಿಷ್ಣೋಯಿ ಎಂಬ ಮಹಿಳೆ  (23) ತನ್ನ ಗಂಡನೊಂದಿಗೆ ಕಳೆದ ರಾತ್ರಿ ಜಗಳವಾಡಿದ್ದಾಳೆ. ಇಬ್ಬರ ನಡುವೆ ಮಾತು ಬೆಳೆದು ಪರಿಸ್ಥಿತಿ  ತೀವ್ರ ವಿಕೋಪಕ್ಕೆ ತಿರುಗಿದೆ.

 ಸೋಹ್ನಿ ಬಿಷ್ಣೋಯಿ ತನ್ನ ಇಬ್ಬರು ಮಕ್ಕಳನ್ನು ಕರೆದು ಕೊಂಡು ಮನೆ ಪಕ್ಕದ ಕೆರೆಗೆ ಹೋಗಿ ಹಾರಿದ್ದಾಳೆ. ಅದರೆ  ಮಕ್ಕಳಾದ ಸಮೀಕ್ಷಾ ಮತ್ತು  ಅನುಭವ್ ಮೃತಪಟ್ಟಿದ್ದಾರೆ. ತಾಯಿ ಬದುಕಿ ಉಳಿದಿದ್ದಾರೆ ಎಂದು  ಸಬ್  ಇನ್ಸ್ಪೆಕ್ಟರ್ ಭಗವಾನ್ ಸಿಂಗ್ ಹೇಳಿಕೆ ನೀಡಿದ್ದಾರೆ .

ಸೋಹ್ನಿ ಬಿಷ್ಣೋಯ್ ಹೇಳಿಕೆ ಹಾಗೂ ಅವರ  ಕುಟುಂಬಸ್ಥರು ನೀಡಿದ ಹೇಳಿಕೆಯ  ಆಧಾರದ ಮೇಲೆ ಪತಿಯ  ವಿರುದ್ಧ ಹಲ್ಲೆ ಹಾಗೂ ಕಿರುಕುಳ  ಆರೋಪದಡಿ  ಪ್ರಕರಣ  ದಾಖಲಿಸಲಾಗಿದೆ .