ಮನೆ ರಾಷ್ಟ್ರೀಯ ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಕಾನ್ಸ್‌ಟೇಬಲ್ ತಾಯಿಗೆ ಭಾರತದಲ್ಲಿ ಉಳಿಯಲು ಅನುಮತಿ

ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಕಾನ್ಸ್‌ಟೇಬಲ್ ತಾಯಿಗೆ ಭಾರತದಲ್ಲಿ ಉಳಿಯಲು ಅನುಮತಿ

0

ನವದೆಹಲಿ : ಪಹಲ್ಗಾಮ್ ದಾಳಿ ಬಳಿಕ ಭಾರತವು ಪಾಕಿಸ್ತಾನ ನಾಗರಿಕರ ವೀಸಾ ನವೀಕರಣ ಸ್ಥಗಿತಗೊಳಿಸಿದ್ದರಿಂದಾಗಿ ಹಲವಾರು ಮಂದಿ ಪಾಕಿಸ್ತಾನಕ್ಕೆ ಗಡಿಪಾರುಗೊಳ್ಳಬೇಕಾದ ಪರಿಸ್ಥಿತಿಗೆ ಬಿದ್ದಿದ್ದರು. ಆದರೆ ಕಾಶ್ಮೀರದ ಶೌರ್ಯ ಚಕ್ರ ಪುರಸ್ಕೃತ ಪೊಲೀಸ್ ಪೇದೆ ಮುದಾಸಿರ್ ಅಹ್ಮದ್ ಶೇಖ್ ಅವರ ತಾಯಿ ಶಮೀಮಾ ಅಖ್ತರ್ ಅವರಿಗೆ ಕೇಂದ್ರ ಸರ್ಕಾರ ಭಾರತದಲ್ಲಿ ಉಳಿಯಲು ನಿರ್ಧಾರಿಸಿದೆ.

2022ರ ಮೇ ತಿಂಗಳಲ್ಲಿ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಉಗ್ರರನ್ನು ಎದುರಿಸಿ ಮುದಾಸಿರ್ ಅಹ್ಮದ್ ಶೇಖ್ ಅವರು ಹುತಾತ್ಮರಾದರು. ಅವರ ತಾಯಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶೌರ್ಯ ಚಕ್ರವನ್ನು ಸ್ವೀಕರಿಸಿದ್ದರು. ಶಮೀಮಾ ಅಖ್ತರ್ ಮೂಲತಃ ಪಾಕಿಸ್ತಾನ ಪ್ರಜೆ. ಅವರು 1990ರೊಳಗೆ ಪಾಕಿಸ್ತಾನದ ಮೂಲದವರಾಗಿ ಭಾರತದ ಕಾಶ್ಮೀರದ ವ್ಯಕ್ತಿಯನ್ನು ಮದುವೆಯಾದ ಬಳಿಕ ಇಲ್ಲಿ ವಾಸವಾಗಿದ್ದರು. ಆದರೆ ಪಾಕಿಸ್ತಾನಿ ನಾಗರಿಕರ ವೀಸಾ ನವೀಕರಣ ಸ್ಥಗಿತವಾದ ಹಿನ್ನೆಲೆ ಅವರಿಗೆ ಗಡಿಪಾರುಗೊಳ್ಳುವ ಭೀತಿ ಎದುರಾಗಿತ್ತು.

ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಗನ ತ್ಯಾಗದ ಬಗ್ಗೆಯೂ ಮನಗಂಡ ಸರ್ಕಾರ, ಶಮೀಮಾ ಅವರನ್ನು ಭಾರತದಲ್ಲಿ ಇರಲು ಅನುಮತಿಸಿದೆ. ಇದರಿಂದಾಗಿ ಅವರು ಪುನಃ ತಮ್ಮ ಮನೆಗೆ ಮರಳಿದ್ದಾರೆ. ಇದು ರಾಜಕೀಯ ನಿರ್ಧಾರವಲ್ಲ, ಮಾನವೀಯತೆಯ ಮೇಲೆ ಆಧಾರಿತ ಅಂತಿಮ ತೀರ್ಮಾನವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.