ಮನೆ ಅಪರಾಧ ಮಗಳನ್ನು ಕೊಂದು ಶವದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ

ಮಗಳನ್ನು ಕೊಂದು ಶವದ ಮೇಲೆ ನಿಂತು ನೇಣಿಗೆ ಶರಣಾದ ತಾಯಿ

0

ಶಿವಮೊಗ್ಗ : ನಗರದ ಮೆಗ್ಗಾನ್​ ಆಸ್ಪತ್ರೆಯ ನರ್ಸಿಂಗ್​​ ಕ್ವಾಟ್ರಸ್​ನಲ್ಲಿ ತಾಯಿಯೇ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹತ್ಯೆಯಾದ ಬಾಲಕಿಯನ್ನು ಪೂರ್ವಿಕಾ ಎಂದು ಗುರುತಿಸಲಾಗಿದೆ. ಬಾಲಕಿ 6ನೇ ತರಗತಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ. ನೇಣಿಗೆ ಶರಣಾದ ಮಹಿಳೆಯನ್ನು ಶೃತಿ (38) ಎಂದು ಗುರುತಿಸಲಾಗಿದೆ. ಮಹಿಳೆ ಆತ್ಮಹತ್ಯೆಗೂ ಮುನ್ನ ಮಗಳಿಗೆ ಮಚ್ಚಿನಿಂದ ಹೊಡೆದು ಕೊಂದಿದ್ದಾಳೆ.

ಬಳಿಕ ಆಕೆಯ ಮೃತದೇಹದ ಮೇಲೆ ನಿಂತುಕೊಂಡ ಪ್ಯಾನ್​ಗೆ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶೃತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಳು ಎನ್ನಲಾಗಿದೆ.

ಮಹಿಳೆಯ ಪತಿ ರಾಮಣ್ಣ ಮೆಗ್ಗಾನ್‌ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ಬೆಳಗ್ಗೆ ಕೆಲಸ ಮುಗಿಸಿ ಕ್ವಾಟ್ರಸ್​​ಗೆ ಬಂದಾಗ ವಿಷಯ ತಿಳಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.