ನೀರು ಮತ್ತು ಮೆಥನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ವಿವಿಧ ಬಗೆಯ ರೋಗ ಕಾರಕ ಬ್ಯಾಕ್ಟೀರಿಯಾ ಗಳನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ತಿಳಿದು ಬಂದಿದೆ.
ಮೂತ್ರನಾಳದ ಸೋಂಕಿಗೆ ಕಾರಣವಾದ ಗ್ರಾಮ್ ಪಾಸಿಟೀವ್ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆ. ಆದರೆ, ಗ್ರಾಮ್ ನೆಗೆಟಿವ್ ಬ್ಯಾಕ್ಟೀರಿಯಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವ ಗುಣ ಸತ್ವಕ್ಕೆ ಇಲ್ಲವೆಂದು ವರದಿಯಾಗಿದೆ. ನೀರು ಮತ್ತು ಇದರ ದ್ರಾವಣಗಳನ್ನು ಒಂದರ ನಂತರ ಒಂದನ್ನು ಉಪಯೋಗಿಸಿ ಕಾಯಿಯಿಂದ ತಯಾರಿಸಿದ ಸತ್ವಕ್ಕೆ, ಕರುಳಿನ ಹುಣ್ಣಿಗೆ ಕಾರಣವಾದ ಬ್ಯಾಕ್ಟೀರಿಯವನ್ನು ನಾಶಪಡಿಸುವುದರ ಮೂಲಕ ಕರುಳಿನ ಹುಣ್ಣಿನ ಚಿಕಿತ್ಸೆಗೆ ಉಪಯುಕ್ತವೆಂದು ವರದಿಯಾಗಿದೆ.
ಬೀಜ :
ನೀರು ಮತ್ತು ಮಧ್ಯಸಾರದ ಮಿಶ್ರಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯ ಬೀಜದಿಂದ ತಯಾರಿಸಿದ ಸತ್ವಕ್ಕೆ ಮನುಷ್ಯರಲ್ಲಿ ರೋಗವನ್ನುಂಟು ಮಾಡುವ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.
ಆವಿಯಾಗುವಂತಹ ತೈಲ :
ಬೆಟ್ಟದ ನೆಲ್ಲಿಕಾಯಿಯ ಬೀಜದಿಂದ ಬೇರ್ಪಡಿಸಿದ ಆವಿಯಾಗುವಂತಹ ತೈಲಕ್ಕೆ ಬ್ಯಾಕ್ಟೀರಿಯ ನಾಶಕ ಗುಣವಿದೆ ಯೆಂದು ತಿಳಿದುಬಂದಿದೆ.
ಕೀಟದ ಗಂಟು :
ಬೆಟ್ಟದ ನೆಲ್ಲಿಕಾಯಿಯ ಮರದ ಮೇಲೆ ಅಲ್ಲಲ್ಲಿ ಗಂಟುಗಳಿರುತ್ತವೆ. ಈ ರೀತಿಯ ಗಂಟುಗಳ ಉತ್ಪತ್ತಿಗೆ ಒಂದು ಬಗೆಯ ಕೀಟ ಕಾರಣ, ಇಂತಹ ಗಂಟುಗಳಿಂದ ಬೇರ್ಪಡಿಸಿದ ಫಿಲ್ಲೆಂಬ್ಲಿನ್ ಎಂಬ ರಾಸಾಯನಿಕ ಘಟಕಕ್ಕೆ ಸೂಕ್ಷ್ಮಾಣು ಜೀವಿ ನಾಶಕ ಗುಣವಿದೆಯೆಂದು ವರದಿಯಾಗಿದೆ.
ಶಿಲೀಂದ್ರ ನಾಶಕ ಗುಣ :
ಆಸ್ಪರ್ಜಿಲಸ್ ಜಾತಿಗೆ ಸೇರಿದ ವಿವಿಧ ಪ್ರಭೇದದ ಶಿಲೀಂದ್ರಗಳು ಧ್ಯಾನದ ಕಾಳುಗಳು ಆಶ್ರಯಿಸಿ ಬೆಳೆಯುತ್ತವೆ. ಈ ಶಿಲಿಂದ್ರಗಳು ತಮ್ಮ ಬೆಳವಣಿಗೆಯ ಹಂತದಲ್ಲಿ ಹಲವಾರು ನಂಜುಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಇವು ಧಾನ್ಯದ ಕಾಳುಗಳಲ್ಲಿ ಸಂಗ್ರಹವಾಗುತ್ತವೆ. ಇಂತಹ ಕಾಳುಗಳನ್ನು ಸೇವಿಸಿದಾಗ ನಂಜುಕಾರಕ ವಸ್ತು ದೇಹವನ್ನು ಸೇವಿಸಿ ವಂಶ ವಾಹಿನಿಗಳ ಮೇಲೆ ಮೂತ್ರಪಿಂಡದ ಮೇಲೆ ಮತ್ತು ಒಟ್ಟಾರೆ ರೋಗ ನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಇಂತಹ ಶಿಲೀಂದ್ರದ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯ ಬೆಟ್ಟದ ನೆಲ್ಲಿಕಾಯಿಯ ಸತ್ವಕ್ಕೆ ಇದೆ ಎಂದುಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ.
ನೀರು ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ, ಆಲೂಗಡ್ಡೆ ಸಸ್ಯಕ್ಕೆ ರೋಗವಟುನ್ನುಂಟು ಮಾಡುವ ಶಿಲೀಂದ್ರವನ್ನು ನಾಶಪಡಿಸುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.
ಔಷಧಿಯ ಉಪಯೋಗಗಳು
ಉಪಯೋಗಿಸುವ ಭಾಗ : ಕಾಯಿ
ಬೆಟ್ಟದ ನೆಲ್ಲಿಕಾಯಿಯ ಚೂರ್ಣದ ಪ್ರಮಾಣ ದಿನಕ್ಕೆ : 3 – 6 ಗ್ರಾಂ
ಕಷಾಯದ ಪ್ರಮಾಣ ದಿನಕ್ಕೆ 20 ಮಿ.ಮಿ.ಲೀ *
ಸೂಚನೆ : ಬೆಟ್ಟದ ನೆಲ್ಲಿಕಾಯಿಯ ಚೂರ್ಣ ಕಷಾಯವನ್ನು ಕೆಲವೊಂದು ಕಾಯಿಲೆಗಳ ಚಿಕಿತ್ಸೆಯಲ್ಲಿ ಹಾಲಿನೊಡನೆ ಸೇವಿಸಬಹುದೆಂದು ಆಯುರ್ವೇದದ ಗ್ರಂಥಿಗಳಲ್ಲಿ ಉಲ್ಲೇಖನವಿದೆಯಾದರೂ ನೀರು,, ತುಪ್ಪ ಮತ್ತು ಜೇನುತುಪ್ಪದೊಡನೆ ಸೇವಿಸುವುದು, ಸೂಕ್ತವೆನಿಸುತ್ತದೆ.ಕೆಲವರಿಗೆ ಚೂರ್ಣದ ಸೇವನೆಯಿಂದ ಚರ್ಮ ಒಣಗಿದಂತಹ ಅನುಭವವಾಗುತ್ತದೆ ಅಂತಹವರು ಚೂರ್ಣವನ್ನು ತುಪ್ಪದೊಡನೆ ಸೇವಿಸಬೇಕಾಗುತ್ತದೆ ಬೆಟ್ಟದ ನೆಲ್ಲಿಕಾಯಿಯ ಇಂದ ದೇಹದ ಮೇಲೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಉಂಟಾದ ಬಗ್ಗೆ ಮಾಹಿತಿ ಇಲ್ಲ,ವಯಸ್ಕರರು ಯಾವುದೇ ತೊಂದರೆಯಿಲ್ಲದೆ ಉಪಯೋಗಿಸಬಹುದು.ಆದರೆ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬಹುದು.
ಚೂರ್ಣ ತಯಾರಿಸುವ ವಿಧಾನ :
ಒಳ್ಳೆಯ ಗುಣಮಟ್ಟದ ನೆಲ್ಲಿಕಾಯಿಯನ್ನು ಆಯ್ಕೆ ಮಾಡಿ ಶುಚಿಗೊಳಿಸಿ ಸ್ಟೀಲ್ ಚಾಕು ಉಪಯೋಗಿಸಿ ಸಣ್ಣ ಚೂರುಗಳಗಾಗಿ ಕತ್ತರಿಸಿ ಬೀಜವನ್ನು ಬೇರ್ಪಡಿಸಬೇಕು. ಚೂರುಗಳನ್ನು ಬಟ್ಟೆಯ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಬೇಕು. ಇದು ಸಾಧ್ಯವಾಗದಿದ್ದಲ್ಲಿ ಬಿಸಿಲಿನಲ್ಲಿ ಒಣಗಿಸಬೇಕು ಚೆನ್ನಾಗಿ ಒಣಗಿದ ನಂತರ ಕುಟ್ಟಿ ಪುಡಿ ಮಾಡಿ ಬಟ್ಟೆಯ ಮೂಲಕ ಸೊಸೆ ಸಂಗ್ರಹಿಸಿದ ಚೂರ್ಣವನ್ನು ಮುಂದಿನ ಉಪಯೋಗದವರೆಗೆ ಬಾಟಲ್ನಲ್ಲಿ ಸಂಗ್ರಹಿಸಬೇಕು.
ಮಾರುಕಟ್ಟೆಯಲ್ಲಿ ಹಲವಾರು ಔಷಧಿ ಕಂಪನಿಗಳು ಬಿಡುಗಡೆ ಮಾಡಿದ ನೆಲ್ಲಿಕಾಯಿಯ ಚೂರ್ಣ ದೊರೆಯುತ್ತದೆ. ಸೂಕ್ತವೆನಿಸಿದ ಕಂಪನಿಯ ಚೂರ್ಣವನ್ನು ಆಯ್ಕೆ ಮಾಡಿ ಚಿಕಿತ್ಸೆಗೆ ಉಪಯೋಗಿಸಬಹುದು.
ಕಷಾಯ ತಯಾರಿಸುವ ವಿಧಾನ :
5 ಗ್ರಾಂ ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು 20 ಮೀ. ಲಿ. ನೀರಿಗೆ ಮಿಶ್ರಣ ಮಾಡಿ ಕುದಿಸಿ 20 ಮಿ.ಲೀ.ನಷ್ಟು ಕಷಾಯ ಉಳಿದೃ ನಂತರ ಒಂದು ಪಾತ್ರೆಗೆ ಸೋಸಿ ಕೊಂಡು ಅಗತ್ಯವೆನಿಸಿದರೆ ಜೇನುತುಪ್ಪ ಸೇರಿಸಿ ಸೇವಿಸಬಹುದು.
ಬೆಟ್ಟದ ನೆಲ್ಲಿಕಾಯಿಯ ಕಷಾಯ ಚೂರ್ಣದಷ್ಟು ಪರಿಣಾಮಕಾರಿಯಲ್ಲ ಏಕೆಂದರೆ ತಯಾರಿಕೆಯ ಹಂತದಲ್ಲಿ,, ಅಧಿಕ ತಾಪಮಾನದಲ್ಲಿ ತಯಾರಿಸುವುದರಿಂದ ಜೀವಸತ್ವ ಸಿ ಅಂಶ ನಶಿಸಿ ಹೋಗಿರುತ್ತದೆ. ಕೆಲವು ಚಿಕಿತ್ಸೆಗಳಿಗೆ ಮಾತ್ರ ಉಪಯೋಗವಾಗುತ್ತದೆ.