ನಿಯಮಿತವಾಗಿ ಬೆಟ್ಟದ ನೆಲ್ಲಿಕಾಯಿ ಚೂರ್ಣ ಸೇವಿಸುವುದರಿಂದಾಗುವ ಉಪಯೋಗಗಳು :
1. ಬೆಟ್ಟದ ನೆಲ್ಲಿಕಾಯಿಯ ಚೂರ್ಣದಿಂದ ಹಲ್ಲುಜ್ಜುವುದರಿಂದ ಮತ್ತು ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಮೇಲೆ ಕರೆ ಕಟ್ಟುವುದಿಲ್ಲ ಮತ್ತು ವಸಡಿನ ಕಾಯಿಲೆಗಳುಂಟಾಗುವುದಿಲ್ಲ. ಹಲ್ಲಿನ ಮೇಲೆ ಕರೆಕಟ್ಟಲು ಕಾರಣವಾದ ಬ್ಯಾಕ್ಟೀರಿಯ ಮತ್ತು ವಸಡಿನ ಉರಿಯೂತಕ್ಕೆ ಕಾರಣವಾದ ಬ್ಯಾಕ್ಟೀರಿಯವನ್ನು ನಾಶಪಡಿಸುವ ಸಾಮರ್ಥ್ಯ ಚೂರ್ಣಕ್ಕೆ ಇದೆ. ಒಟ್ಟಾರೆ ಚೂರ್ಣದಿಂದ ಬಾಯಿ ಆರೋಗ್ಯ ಉತ್ತಮವಾಗಿರುತ್ತದೆ.
2. ಅಜೀರ್ಣ ವ್ಯಾಧಿಯನ್ನು ಗುಣಪಡಿಸುತ್ತದೆ.
3. ಮಲಬದ್ಧತೆ ನಿವಾರಣೆಯಾಗುತ್ತದೆ.
4. ಆಮ್ಲ ಪಿತ್ತವನ್ನು ಗುಣಪಡಿಸುತ್ತದೆ.
5. ಅತಿಯಾಗಿ ಮೈ ಬೆವರುವುದನ್ನು ಕಡಿಮೆ ಮಾಡುತ್ತದೆ.
6. ಕರುಳಿನಲ್ಲಿ ಹುಣ್ಣಾಗುವುದನ್ನು ತಡೆಯುತ್ತದೆ.
7. ಜಂತುಹುಳು ನಿವಾರಣೆಯಾಗುತ್ತದೆ.
8. ಬೊಜ್ಜು ಬೆಳೆಯುವುದಿಲ್ಲ.
9. ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ ಕೆಟ್ಟ ಕೊಲೆಸ್ಟಿರಾಲ್ ಅಂಶವನ್ನು (LDL, VLDL ಮತ್ತು ಟ್ರೈಗ್ಲಿಸರೈಡ್ )) ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ (HDL)ಪ್ರಮಾಣವನ್ನು ವೃದ್ಧಿ ಮಾಡುವುದರ ಮೂಲಕ ಹೃದಯ ಕಾಯಿಲೆಯಿಂದ ದೇಹವನ್ನು ಕಾಪಾಡುತ್ತದೆ.
10. ರಕ್ತದ ಏರತೊಡ ಇರುವವರು ಇತರರ ಅಲೋಪತಿ ಔಷಧಗಳೊಡನೆ ಬೆಟ್ಟದ ನೆಲ್ಲಿಕಾಯಿಯ ಚೂರ್ಣ ಕಷಾಯ ಸೇವಿಸುವುದರಿಂದ ರಕ್ತದ ಏರೊತ್ತದ ಸಹಜ ಸ್ಥಿತಿಗೆ ಕಥೆಗೆ ಬರುತ್ತದೆ. ಜೊತೆಗೆ ದೇಹಾರೋಗ್ಯವು ಉತ್ತಮಗೊಳ್ಳುತ್ತದೆ.
11. ರಕ್ತಹೀನತೆ ಗುಣವಾಗುತ್ತದೆ.
12. ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ.
13. ಇತರ ಔಷಧಿಗಳನ್ನು ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯುಂಟಾಗುತ್ತದೆ ಮತ್ತು ದೇಹಾರೋಗ್ಯ ಉತ್ತಮವಾಗುತ್ತದೆ.
14. ಖಿನ್ನತೆಯನ್ನು ಕಡಿಮೆ ಮಾಡುತ್ತದೆ, ಜ್ಞಾಪಕ ಶಕ್ತಿಯನ್ನು ಉತ್ತಮಪಡಿಸುತ್ತದೆ ಮತ್ತು ಮುದಿತನದಲ್ಲಿ ಉಂಟಾಗುವ ಮರೆವಿನ ಕಾಯಿಲೆಯನ್ನು ತಡೆಯುವ ಸಾಮರ್ಥ್ಯವಿದೆ.
15. ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ ಮತ್ತು ಕಣ್ಣಿನ ಪೊರೆ ಬೆಳೆಯದಂತೆ ತಡೆಯುತ್ತದೆ.
16. ಚರ್ಮ ಕಾಂತಿಯುಕ್ತವಾಗುತ್ತದೆ.
17. ಚೂರ್ಣವನ್ನು ನೀರಿನಲ್ಲಿ ಕಲಸಿ ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ಚರ್ಮದಲ್ಲಿ ನೆರಿಗೆಗಳುಂಟಾಗುವುದಿಲ್ಲ. ಮುಪ್ಪಿನ ಲಕ್ಷಣಗಳು ಮರೆಯಾಗಿ ಯುವಕರಂತೆ ಚೈತನ್ಯ ಉಂಟಾಗುತ್ತದೆ. ಕೂದಲು ಬೆಳ್ಳಗಾಗುವುದಿಲ್ಲ ಕೂದಲು ಚೆನ್ನಾಗಿ ಬೆಳೆಯುತ್ತದೆ.
18.ಕಾಮಶಕ್ತಿಯನ್ನುಂಟು ಮಾಡುತ್ತದೆ.
19. ಮಧುಮೇಹಕ್ಕೆ ತೆಗೆದುಕೊಳ್ಳುವ ಔಷಧಿಗಳೊಡನೆ ಚೂರ್ಣವನ್ನು ಸೇವಿಸುವುದರಿಂದ ಮಧುಮೇಹದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುತ್ತದೆ.
20. ಕೆಮ್ಮುವಾಸಿಯಾಗುತ್ತದೆ.
21. ಜ್ವರ ಕಡಿಮೆಯಾಗುತ್ತದೆ
22. ಕೀಲ್ವಾಯು ಗುಣವಾಗುತ್ತದೆ.
23. ಕಬ್ಬಿನ ರಸದೊಡನೆ ಸೇವಿಸಿದರೆ ಉರಿಮೂತ್ರ ಕಡಿಮೆಯಾಗುತ್ತದೆ.
24. ಥೈರಾಯ್ಡ್ ಗ್ರಂಥಿಯ ಕಾರ್ಯ ಚಟುವಟಿಕೆಯನ್ನು ನಿಯಂತ್ರಣದಲ್ಲಿರುತ್ತದೆ.
. ಥೈರಾಯ್ಡ್ ಗ್ರಂಥಿಯ ನ್ಯೂನತೆಯಿಂದ ಉಂಟಾಗುವ ಉಂಟಾಗುವ ಕಾಯಿಲೆಗಳು ಕಂಡುಬರುವುದಿಲ್ಲ.
25. ಎಲುವು ನಶೆಯಿಸುವಿಕೆ ಮತ್ತು ಎಲುಬು ತೂತಿಕೆ ರೋಗ ಉಂಟಾಗುವ ಸಂಭವ ಕಡಿಮೆ.
26. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವವರು ನಿಯಮಿತವಾಗಿ ಚೂರ್ಣವನ್ನು ಸೇವಿಸುವುದರಿಂದ ವಿಕಿರಣದಿಂದ ದೇಹದ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮ ಕಡಿಮೆಯಾಗುತ್ತದೆ.
27. ಚೂರ್ಣವನ್ನು ನೀರಿನಲ್ಲಿ ಕಲಸಿ ಗಾಯದ ಮೇಲೆ ಲೇಪಿಸಿದರೆ ಗಾಯ ಬೇಗ ವಾಸಿಯಾಗುತ್ತದೆ ಚೂರ್ಣದ ಈ ಗುಣಕ್ಕೆ ಅದರದಲ್ಲಿ ಅಡಕವಾಗಿರುವ ಆಸ್ಕಾರ್ಬಿಕ್ ಆಮ್ಲ ಮತ್ತು ಟ್ಯಾನಿನ್ ಕಾರಣ.
ನೆಲ್ಲಿಕಾಯಿಯ ಸರಬತ್ ಮಾಡುವ ವಿಧಾನ :
ನೆಲ್ಲಿಕಾಯಿಗಳನ್ನು ಚೂರುಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕಬೇಕು.ಚೂರಿನ ಸಮಭಾಗ ನೀರು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಿ ಪಾತ್ರೆಗೆ ಸೋಸಿಕೊಳ್ಳಬೇಕು. ಸಿಹಿ ಸರಬತ್ ಬೇಕೆನ್ನುವವರು ಸಕ್ಕರೆ ಜೇನುತುಪ್ಪ ಮತ್ತು ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಬೆಟ್ಟದನಲ್ಲಿಕಾಯಿಯ ಸಿಹಿ ಶರಬತ್ ಸೇವಿಸಬಹುದು. ಸಿಹಿ ಸರ್ವತ್ ಬೇಡ ಎನ್ನುವವರು ಮಿಕ್ಸಿ ಮಾಡಿ ಸಮಯದಲ್ಲಿ ಸ್ವಲ್ಪಯದಲ್ಲೇ ಶುಂಠಿ, ಸ್ವಲ್ಪ ಮೆಣಸಿನ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಕ್ಸಿ ಮಾಡಿ ಸೋಸಿದರೆ ಉತ್ತಮ ಶರಬತ್ ತಯಾರಾಗುತ್ತದೆ.
100 -150 ಮಿ,ಲೀ ಪ್ರಮಾಣದಲ್ಲಿ ಶರಬತ್ ಅನ್ನು ದಿನಕ್ಕೆ ಒಂದು ಬಾರಿ ಸೇವಿಸಿದರೆ ಚೂರ್ಣ ಸೇವಿಸಿದಷ್ಟೇ ಪರಿಣಾಮ ಉಂಟಾಗುತ್ತದೆ.