ಮನೆ ಮನೆ ಮದ್ದು ಬಾಯಿ ಹುಣ್ಣು

ಬಾಯಿ ಹುಣ್ಣು

0

1. ಕೊತ್ತಂಬರಿ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ, ನಾಲಿಗೆಯ ಮೇಲೆ ಹಚ್ಚಿಕೊಂಡು ಚಪಡಿಸುತ್ತಿದ್ದರೆ ಬಾಯಿ ಹುಣ್ಣು ಗುಣ ಆಗುವುದು.

2. ಕೊತ್ತಂಬರಿ ಸೊಪ್ಪನ್ನು ಹಸಿಯಾಗಿಯೇ ಹಲ್ಲುಗಳಿಂದ ಜಗಿಯುತ್ತಿದ್ದರೆ ಬಾಯಿಯ ದುರ್ಗಂಧ ಕಡಿಮೆ ಆಗುತ್ತದೆ.

3. ದಿನಕ್ಕೆ ಮೂರು ನಾಲ್ಕು ಬಾರಿ ಆದರೂ ಬಾಯಿಹುಣ್ಣು ಆಗಿರುವ ಜಾಗದಲ್ಲಿ ಜೇನುತುಪ್ಪ ಹಚ್ಚುತ್ತಿದ್ದರೆ ಬೇಗ ವಾಸಿಯಾಗುವುದು.

4. ಪ್ರತಿದಿನವೂ ಪ್ರಾತಃಕಾಲವೇ ಎಂದು ಒಂದು ಬಟ್ಟಲಿನಷ್ಟು ನೊರೆ ಹಾಲನ್ನು ಸೇವಿಸುತ್ತಿದ್ದರೆ ಬಾಯಿ ಹುಣ್ಣು ವಾಸಿ ಆಗುವುದು.

5. ಚಿಗುರು ಸೀಬೆ ಎಲೆಗಳ ಕಷಾಯವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ,ದಿನವೂ ಮೂರು ಸಾರಿ ಬಾಯಿ ಮುಕ್ಕಳಿಸುವುದರಿಂದ ಕೆಲವೇ ದಿನಗಳಲ್ಲಿ ಬಾಯಿ ಹುಣ್ಣು ವಾಸಿಯಾಗುವುದು.ಜೊತೆಗೆ ಬಾಯಿಯಿಂದ ಬರುವ ದುರ್ವಾಸನೆಯೂ ದೂರ ಆಗುವುದು, ವಸಡಿನ ರಕ್ತಸ್ರಾವೂ ಕಡಿಮೆ ಆಗುವುದು.

6. ನೆಲ್ಲಿಕಾಯಿಯ ಎಲೆಗಳಿಂದ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಮೇಲಾಗುವುದು.

7. ಕಲ್ಲುಸಕ್ಕರೆ ಮತ್ತು ಒಣಕೊಬ್ಬರಿಯನ್ನು ಚೆನ್ನಾಗಿ ಆಗಿದು ತಿನ್ನುವುದರಿಂದ ಬಾಯಿಹುಣ್ಣು ಗುಣಮುಖ ಆಗುವುದು.

8. ಬಿಸಿ ನೀರಿಗೆ ಉಪ್ಪು ಬೆರೆಸಿ, ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಇಲ್ಲದಂತಾಗುವುದು.

9. ಈರುಳ್ಳಿಯನ್ನು ನುಣ್ಣಗೆ ಅರೆದು,ರಕ್ತಸ್ರಾವ ಆಗುತ್ತಿರುವ ವಸಡಿಗೆ ಲೇಪಿಸುವುದರಿಂದ ರಕ್ತಸ್ರಾವ ನಿಲ್ಲುವುದು.

10. ಗಸಗಸೆ, ಒಣಕೊಬ್ಬರಿಯನ್ನು ಆಗಿದು ತಿನ್ನುವುದರಿಂದ ಬಾಯಿ ಹುಣ್ಣು ಕಡಿಮೆ ಆಗುವುದು.

11. ದಾಳಿಂಬೆ ಹಣ್ಣಿನ ದಿಂಡನ್ನು ಬೇಯಿಸಿ ತಯಾರಿಸಿದ ಕಷಾಯಕ್ಕೆ ಉಪ್ಪು ಸೇರಿಸಿ, ಹಲವು ಬಾರಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣಿನ ನೋವೂ ಕಡಿಮೆ ಆಗುವುದು.ಹುಣ್ಣುಗಳು ಒಣಗುವುದು.

12. ಕೆಂಪು ಗಣಿಗೆ ಸೊಪ್ಪನ್ನು ಬೇಯಿಸಿ ತಿನ್ನುತ್ತಿದ್ದರೆ ಬಾಯಿ ಹುಣ್ಣು ವಾಸಿಯಾಗುವುದು.

13. ಚೆನ್ನಾಗಿ ಮಾಗಿದ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ಬಾಯಿ ಹುಣ್ಣು ಬೇಗ ವಾಸಿಯಾಗುವುದು.