ಮನೆ Uncategorized ನೂತನ ವಿದ್ಯುತ್ ಮಾರ್ಗಕ್ಕೆ ಚಾಲನೆ: ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮಾಹಿತಿ

ನೂತನ ವಿದ್ಯುತ್ ಮಾರ್ಗಕ್ಕೆ ಚಾಲನೆ: ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮಾಹಿತಿ

0

ಮೈಸೂರು: ಮೈಸೂರು ಜಿಲ್ಲೆ ಮತ್ತು ತಾಲ್ಲೂಕು ವರಕೂಡು ಗ್ರಾಮದಲ್ಲಿ ಉದ್ದೇಶಿತ 1X8 MVA, 66/11 ಕೆ.ವಿ. ವಿದ್ಯುತ್ ಉಪ-ಕೇಂದ್ರಕ್ಕೆ 66 ಕೆ.ವಿ ದ್ವಿಮುಖ  ವಿದ್ಯುತ್ ಮಾರ್ಗವು ಹಾಲಿ ಇರುವ ವಾಜಮಂಗಲ-ಕಡಕೊಳ ಮಾರ್ಗದಿಂದ ಉದ್ದೇಶಿತ  ಸುಮಾರು 1.856 ಕೀ. ಮೀ. ನೂತನವಾಗಿ  ನಿರ್ಮಿಸಿರುವ  ಪ್ರಸರಣಾ ವಿದ್ಯುತ್ ಮಾರ್ಗವನ್ನು ಉದ್ದೇಶಿತ 1X8 MVA, 66/11 ವರುಣ (ವರಕೋಡು) ಕೇಂದ್ರಕ್ಕೆ ಪ್ರವಹಿಸಲಾಗುವುದು.

 ಆದ್ದರಿಂದ ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲೀ, ಲೋಹದ ಪಟ್ಟಿಯನ್ನು ತೆಗೆಯುವುದಾಗಲೀ, ಗೋಪುರಗಳನ್ನು ಹತ್ತುವುದಾಗಲಿ ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲೀ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದುವುಗಳನ್ನು ಎಸೆಯುವುದಾಗಲೀ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲೀ ಮಾಡುವುದು ತುಂಬಾ ಅಪಾಯಕಾರಿಯಾಗಿ ಹಾಗೂ ಪ್ರಾಣ ಹಾನಿಯಾಗುವುದರಿಂದ  ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣ ಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರರಲ್ಲ ಎಂದು ಕವಿಪ್ರಸನಿನಿಯ ಯೋಜನೆಗಳು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರಾದ ಪೂರ್ಣಚಂದ್ರ ತೇಜಸ್ವಿ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.