ಮನೆ ರಾಜಕೀಯ ಕೆ ಆರ್‌ ಎಸ್ ಜಲಾಶಯ ಪರಿಶೀಲಿಸಿ ಮಾಹಿತಿ ಪಡೆದ ಸಂಸದೆ ಸುಮಲತಾ ಅಂಬರೀಶ್

ಕೆ ಆರ್‌ ಎಸ್ ಜಲಾಶಯ ಪರಿಶೀಲಿಸಿ ಮಾಹಿತಿ ಪಡೆದ ಸಂಸದೆ ಸುಮಲತಾ ಅಂಬರೀಶ್

0

Join Our Whatsapp Group

ಶ್ರೀರಂಗಪಟ್ಟಣ: ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಬರದ ಕಾರಣ ಕೆ.ಆರ್. ಎಸ್ ಜಲಾಶಯದಲ್ಲಿ ಮುಂದಿನ ಎರಡು ವಾರಗಳ ಕಾಲ ಕುಡಿಯುವ ನೀರು ಲಭ್ಯವಿದ್ದು ಈಗೇ ಮುಂದುವರೆದರೆ ಆತಂಕ ಎದುರಾಗಬಹುದು ಎಂದು ಸಂಸದೆ ಸುಮಲತಾ ಅಂಬರೀಶ್ ಕಳವಳ ವ್ಯಕ್ತಪಡಿಸಿದರು.

ಗುರುವಾರ ತಾಲೂಕಿನ ಕೆ ಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ಪ್ರಸ್ತುತ ಅಣೆಕಟ್ಟೆಯ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

ಕಾವೇರಿ ಕೊಳ್ಳದಲ್ಲಿ ಮಳೆ ಇಲ್ಲ: ಪ್ರಸ್ತುತ ಅಣ್ಣೆಕಟ್ಟೆಯಲ್ಲಿ ಇಂದಿನ ನೀರಿನ ಮಟ್ಟ ೭೮ ಅಡಿಗಳಿದ್ದು, ಕಳೆದ ವರ್ಷ ಇದೇ ದಿನ ೧೧೪.೭೦ ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರಿಗೆ ಬಳಕೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಅನೇಕ ಬಾರಿ ಜುಲೈ ೧೫ ರ ನಂತರವೂ ಮಳೆಯಾಗಿ ನೀರು ಹೆಚ್ಚು ಸಂಗ್ರಹಿಸಿರುವ ಹಿನ್ನಲೆ ಈ ಬಾರಿಯೂ ಅಲ್ಲಿವರೆಗೂ ಕಾದು ನೊಡ ಬೇಕಿದೆ. ಆದರೆ ಈ ಬಾರಿ ನಮಗೆ ಬೇಸಿಗೆಯಲ್ಲೂ ಮಳೆ ಬಂದಿಲ್ಲ ಹಾಗೂ ಇಲ್ಲಿಯವರೆಗೂ ಹೆಚ್ಚಾಗಿ ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ ಆಗದಿರುವುದು ಸಮಸ್ಯೆಗೆ ಕಾರಣಗಳಾಗುತ್ತಿದೆ.

ಮುಂಗಾರು ಉತ್ತಮವಾಗಿಲ್ಲದ ಕಾರಣ ಒಡಂಬಡಿಕೆಯಂತೆ ತಮಿಳುನಾಡಿಗೆ ಈ ಬಾರಿ ನೀರು ಬಿಡಲು ಸಾದ್ಯವಾಗುವುದಿಲ್ಲವೇನೋ ಆದರೆ ಮುಂದಿನ ದಿನಗಳಲ್ಲಿ ನಮ್ಮ ಒಳಹರಿವಿನ ಮೇಲೆ ೫೦% ೫೦%ರ ಅನುಪಾತದಲ್ಲಿ ತಮಿಳುನಾಡು ನಾವು ನೀರನ್ನು ಹಂಚಿಕೆ ಮಾಡಿಕೋಳ್ಳುತ್ತೇವೆ ಎಂದು ಸಂಸದರಿಗೆ ಕಾವೇರಿ ನೀರಾವರಿ ನಿಗಮದ ಇ. ಇ. ರಾಮಮೂರ್ತಿ ಮಾಹಿತಿ ನೀಡಿದು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್  ನಿರೀಕ್ಷೆಯಂತೆ ಈ ಬಾರಿ ನೀರಿನ ಅಭಾವ ಎದುರಾಗಬಹುದು. ಆದ್ದರಿಂದ ಮುಂಜಾಗ್ರತಾ ಯಾವೆಲ್ಲಾ ಕ್ರಮಗಳನ್ನು ತೆಗೆದು ಕೊಳ್ಳಬಹುದು ಎಂದು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ,ಕಳೆದ ನಾಲ್ಕು ವರ್ಷ ಉತ್ತಮ ಮಳೆಯಾಗಿದ್ದರಿಂದ ನೀರಿನ ಸಮಸ್ಯೆ ಬಂದಿರಲಿಲ್ಲಾ ಆದರೆ ಈ ಬಾರಿ ಪರಿಸ್ಥಿತಿ ಹಿಂದಿನ ಬಾರಿಯಂತಿಲ್ಲ ಹಾಗಾಗಿ ನೀರಿನ ಸಮಸ್ಯೆ ಕುರಿತು ಸಂಸತ್ ಸದನದಲ್ಲಿ ನಮ್ಮ ಕಾವೇರಿ ಪರ ಧ್ವನಿ ಎತ್ತುತ್ತೇನೆ. ಟ್ರೈಯಲ್ ಬ್ಲಾಸ್ಟ್ ಗೆ ಸ್ಥಳೀಯ ರೈತರ ವಿರೋಧವಿದೆ ಹಾಗಾಗಿ ಇಲ್ಲಿಯವರೆಗೆ ಟ್ರೈಯಲ್ ಬ್ಲಾಸ್ಟ್ ಆಗುತ್ತಿಲ್ಲ ಮುಂದಿನ ದಿನಗಳಲ್ಲಿ ರೈತರು ಒಪ್ಪಿದರೆ ಟ್ರೈಯಲ್ ಬ್ಲಾಸ್ಟ್ ಖಂಡಿತಮಾಡಿಸಬಹುದು ಹಿಂದೆ ಟ್ರೈಯಲ್ ಬ್ಲಾಸ್ಟ್ ಮಾಡಲು ಕೇಂದ್ರದ ನಿಯೋಗ ಬಂದಿತ್ತು .ಆಗ ಕೆಲ ಅಧಿಕಾರಿಗಳು ಗಣಿಮಾಲೀಕರ ಪರ ನಿಂತು ಅದನ್ನು ತಡೆದು ವಾಪಸ್ ಹೋಗುವಂತೆ ಮಾಡಲಾಯಿತು ಎಂದು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.

ನಾನು ಯಾವ ಪಾರ್ಟಿಯಲ್ಲೂ ಇಲ್ಲಾ: ಮುಂಬರುವ ಲೋಕಸಭೆ ಚುನಾವಣೆಗೆ ಜೆ ಡಿ ಎಸ್ ಹಾಗೂ ಬಿಜೆಪಿ ಮೈತ್ರಿಮಾಡಿಕೋಳ್ಳುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದೆ ನಾನು ಯಾವ ಪಾರ್ಟಿಯಲ್ಲೂ ಇಲ್ಲಾ ನಾನು ಪಕ್ಷೇತರವಾಗಿ ನಿಂತು ಗೆದಿದ್ದು, ನಾನು ಬಿಜೆಪಿಗೆ ಹೊರಗಡೆಯಂದ ಬೆಂಬಲ ನೀಡಿದ್ದೇನೆ ಹೊರತು ಬಿಜೆಪಿಯ ಯಾವುದೇ ಸಭೆ ಸಮಾರಂಭಗಳಲ್ಲಿ ನಾನು ಭಾಗಿಯಾಗಿಲ್ಲಾ ಹಾಗಾಗಿ ಮೈತ್ರಿ ವಿಷಯ ಆಯಾ ಪಕ್ಷಗಳಿಗೆ ಸಂಬಂಧಪಟ್ಟಿದ್ದು, ನಾನು ಬಿಜೆಪಿ ಅಧಿಕೃತ ಸದಸ್ಯೆ ಅಲ್ಲಾ ನಾನು ಬಿಜೆಪಿ ಪಕ್ಷದ ಆಂತರಿಕ ವಿಚಾರದಲ್ಲಿ ನಿರ್ಧಾರಗಳು ಅವರಿಗೆ ಬಿಟ್ಟಿದ್ದು ಎಂದರು.

ಯುವ ಮುಖಂಡ ದರ್ಶನ್ ಲಿಂಗರಾಜು,ಶಶಿಕುಮಾರ್, ಮಹದೇವಸ್ವಾಮಿ,ವೆಂಕಟೇಶ್ ಸೇರಿದಂತೆ ಇತರ ಅಧಿಕಾರಿ ಸಿಬ್ಬಂಧಿಗಳು ಜೊತೆಯಲ್ಲಿದ್ದರು.