ಮೈಸೂರು: ಮೈಸೂರಿನ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕ ಕಚೇರಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಮೈಸೂರಿನ ಡಿಆರ್‌ಎಂ ಕಚೇರಿಯಲ್ಲಿ ಡಿಆರ್‌ಎಂ ರಾಹುಲ್ ಅಗರ್‌ವಾಲ್ ಜೊತೆ ಮಾತುಕತೆ ನಡೆಸಿದರು. ಮಂಡ್ಯ ಜಿಲ್ಲೆಯಲ್ಲಿ ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ರೈಲ್ವೆ ಯೋಜನೆಗಳ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಚರ್ಚಿಸಿದ್ದಾರೆ.
ಪ್ರಾದೇಶಿಕ ವ್ಯವಸ್ಥಾಪಕರ ಭೇಟಿ ನಂತರ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್,ಪ್ರಮುಖವಾಗಿ ಶ್ರೀರಂಗಪಟ್ಟಣದಲ್ಲಿ ಹೆಚ್ಚು ರೈಲುಗಳು ನಿಲುಗಡೆ ಮಾಡಬೇಕು. ಶ್ರೀರಂಗಪಟ್ಟಣವನ್ನು ಟೂರಿಸಂ ಸರ್ಕ್ಯೂಟ್ ಮಾಡುವ ಕನಸಿದೆ. ಕನಿಷ್ಟ 21 ಬೋಗಿ ಇರುವ ರೈಲುಗಳನ್ನು ನಿಲ್ಲಿಸಲು ಕೇಳಿದ್ದೇನೆ. ಇಲ್ಲಿ ಬಂದು ಚರ್ಚೆ ಮಾಡಿ ಮನಸ್ಸು ಸಮಾಧಾನ ಆಗಿದೆ. ಪ್ರಾಧಾನ್ಯತೆ ಮೇರೆಗೆ ಕೆಲವೊಂದು ಕೆಲಸಗಳನ್ನಾದರೂ ಮಾಡಿಕೊಡುತ್ತಾರೆ ಎನ್ನುವ ಆಸೆ. ಇದರಿಂದ ಜಿಲ್ಲೆಯ ಆ ಭಾಗದ ರೈತರಿಗೆ ತುಂಬಾ ಅನುಕೂಲ ಆಗಲಿದೆ ಎಂದರು.














