ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ವಿಜಯನಗರ ೨ನೇ ಹಂತದ ಅನಂತಗೀತಾ ವಿದ್ಯಾಲಯದಲ್ಲಿ ಕ್ರಮ ಸಂಖ್ಯೆ ೪೫ರಲ್ಲಿ ಧನುಷ್ ಎಂಬ ಬುದ್ಧಿಮಾಂದ್ಯ ಯುವಕ ಪ್ರಧಾನಿ ಮೋದಿಯವರಿಂದ ಪ್ರಭಾವಿತನಾಗಿ ಜವಬ್ದಾರಿಯಿಂದ ತನ್ನ ಜೀವನದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಿಸಿದರು. ಅವರಿಗೆ ಅವರ ಮನೆಯವರು ಮತ್ತು ಚುನಾವಣೆ ಸಿಬ್ಬಂಧಿಗಳು ಸಹಕರಿಸಿದರು. ಧನುಷ್ ಮತದಾನದಿಂದ ಇತರರು ಪಾಠ ಕಲಿಯಬೇಕೆಂದು ನೆರೆದಿದ್ದ ಸಾರ್ವಜನಿಕರು ಅಭಿಪ್ರಾಯಪಟ್ಟರು.