ಮೃಗಶಿರಾ ನಕ್ಷತ್ರ :
ಮೃಗಶಿರಾ ನಕ್ಷತ್ರದ ಉತ್ತರಾರ್ಧ ಕ್ಷೇತ್ರ ವ್ಯಾಪ್ತಿ ಶೂನ್ಯ ಅಂಶ ಮಿಥುನದಿಂದ 6 ಅಂಶ 40 ಕಲಾ ಮಿಥುನವರಿಗೆ,ರಾಶಿಯ ಸ್ವಾಮಿ ಬುಧ,ನಕ್ಷತ್ರ ಸ್ವಾಮಿ ಮಂಗಳ, ಮಾಧ್ಯ ನಾಡಿ, ಸರ್ಪಯೋನಿ,ದೇವಗಣ. ನಮಾಕ್ಷರ, ಕಾ, ಕೀ,ಕಿ ಈ ನಕ್ಷತ್ರದ ಉತ್ತರಾರ್ಧ ಭಾಗವು ಜಾತಕಾನ ಶರೀರದ ಕಪಾಳ, ಸ್ವರತಂತು, ಭುಜ, ತೋಳು, ಕಿವಿ,ಬಾಲ್ಯ ಗ್ರಂಥಿ ಮೇಲಿನ ದವಡೆಯನ್ನು ಪ್ರತಿನಿಧಿಸುತ್ತದೆ.
ಮೃಗಶಿರಾ ನಕ್ಷತ್ರದ ಜಾತಕದ ಸ್ವರೂಪ :
ಅನ್ಯರಿಗೆ ಬುದ್ಧಿಶಕ್ತಿಯನ್ನು ನೀಡುವುದರಲ್ಲಿ ಕುಶಲ, ಸಾಹಸಿ, ಉತ್ಸಾಹಿ, ಸಾಮರ್ಥ್ಯವಂತ, ವಿನೋಧಿ, ಚತುರ್ಯದಿಂದ ತಕ್ಷಣ ಉತ್ತರಿಸುವವ, ತೀವ್ರ ಸ್ವಭಾವದವ, ಧಾರಪ್ರವಾಹ,ಚಕಿಗಿತಗೊಳಿಸುವವ, ಚುಂಬಕೀಯ ವ್ಯಕ್ತಿತ್ವದವ, ಭಾವನಾತ್ಮಕ,ಶೀಘ್ರ ಉತ್ತೇಜತನಾ ಗುವವ ರೋಷಬಂದಾಗ ಅತ್ಯಂತ ಕಠಿಣ ವ್ಯವಹಾರ ಮಾಡುವವ, ಸ್ವಾರ್ಥ ಭಾವನೆಯ ವಿಶೇಷ, ಚೆಂಚಲ, ಅಸ್ಥಿರ,ಶೀಘ್ರ ಪತ್ಯುತ್ತರ ನೀಡುವವ, ಶೀಘ್ರ ಬೇಸರ ವ್ಯಕ್ತಪಡಿಸುವವ, ವಾಕ್ಪಟು,ಉದ್ಯಮಿ, ಶ್ರೀಮಂಖಿತ,ಕಾಮಸೂಖದಿಂದ ತೃಪ್ತ ಹಾಗೂ ವಾಸನಪ್ರಿಯ.
ಮೃಗಶಿರಾ ಜಾತಕನ ಉದ್ಯೋಗ :
ಯಾಂತ್ರಾದಿಗಳಿಗೆ ಸಂಬಂಧ ಹೊಂದಿರುವವ, ಆಯುಧ, ಉಪಕರಣ,ಅಥವಾ ಸುರಕ್ಷಾತ್ಮಕ ಕ್ಷೇತ್ರದಲ್ಲಿ ನಿರಂತ.ವಿದ್ಯುತ್ ವಸ್ತುಗಳು ಶಲ್ಯ ಚಿಕಿತ್ಸೆ ಭಯ ಯಂತ್ರ ದೂರವಾಣಿ ತಂತಿ ಸಮಾಚಾರ, ಅಭಿಯಂತ ಶಸ್ತ್ರಚಿಕಿತ್ಸಕ,ಸೈನಿಕ,ಗಣಿತಜ್ಞ,ಲೇಕ್ಕತಪಾಸಿಗ ಲೇಖನಕಾರ, ರಾಜ ದೂತ, ಪ್ರತಿನಿಧಿ, ದೂತಕಾರ್ಯದಲ್ಲಿ ನಿಪುಣ ಖಗೋಳ ಶಾಸ್ತ್ರಜ್ಞ, ಭವನ ನಿರ್ಮಿಸುವವ, ವಸ್ತ್ರೋದ್ಯಮದ ಅಭಿಯಂತ, ಧ್ವನಿ ಮುದ್ರಣ, ಗ್ರಾಮ ಫೋನ್, ರೇಡಿಯೋ ಮಾರಾಟಗಾರ,ಮುದ್ರಕ, ಮುದ್ರಣ ಕಾರ್ಯ ವಿಶೇಷಜ್ಞ, ದರೋಡೆಕೋರ,ಗಣಯಂತ್ರ,ಮಾರಾಟಗಾರ, ಸುಗಂಧ ದೃವ್ಯಗಳ ವ್ಯಾಪಾರಿ, ಹಣ್ಣು, ರತ್ನ,ಪಕ್ಷಿ, ಪಶು, ಅರಣ್ಯಾಧಿಕಾರಿ,ಮಧುರಸ ಪಾನ ಮಾಡುವವ, ಪತ್ರವಾಹಕ, ಪ್ರೇಮಿ ಮತ್ತು ಸಂಗೀತಗಾರ.
ಮೃಗಶಿರ ಜಾತಕ ರೋಗ :
ರಕ್ತ ವಿಕಾರ,ವಿಶ್ರಿತ,ರಕ್ತ, ಕಜ್ಜಿ ತುರಿಕೆ,ಗಾಯ, ಕೈ ಮುರಿತ ಕತ್ತಿನ ಮೂಳೆಯ ವಿಚ್ಛೇದ, ಗೃಧ್ರಸೀ ಉರ್ವಸ್ಥಿ ಹೊಟ್ಟೆಯುಬ್ಬರ, ಅತಿ ಭೋಜನ ಜ್ವರ, ಭುಜದ ಸುತ್ತಮುತ್ತ ತೋಳುಗಳಲ್ಲಿ ನೋವು ಗುಪ್ತಾಂಗಗಳ ಅನಿಯಮಿತ ಕಾರ್ಯ ಹೃದಯ ಪ್ರವಾಹ.
ವಿಶೇಷ: ಬುಧನ ರಾಶಿ ಹಾಗೂ ಮಂಗಳನ ನಕ್ಷತ್ರದಲ್ಲಿ ಜನಿಸಿದ ಜಾತಕನ್ನು ವ್ಯವಹಾರ ಮತ್ತು ಮಾತಿನಲ್ಲಿ ಸಿದ್ಧಹಸ್ತನಾಗಿರುತ್ತಾನೆ.ಈತ ಧನವಂತ ಹಾಗೂ ಅನೈತಿಕ ಕಾರ್ಯಗಳಿಂದ ಧನ ಸಂಚಯ ಮಾಡುವ ಅವಕಾಶವನ್ನು ಕೂಡ ಪ್ರಾಪ್ತಿಹೊಂದುತ್ತಾನೆ.ವಿಚಾರಧಾರೆ ಪ್ರಗತಿಗಾಮಿ ಮತ್ತು ವ್ಯಕ್ತಿಗತ ನೇತೃತ್ವ ಪ್ರಧಾನವಾಗುತ್ತಾನೆ. ಸಟ್ಟಾ ಅಥವಾ ಜೂಜಿನ ಪ್ರವೃತ್ತಿ ಕೂಡ ಇರುತ್ತದೆ ಅಧಿಕಾಂಶ ಜಾತಕರು ಸಾರ್ವಜನಿಕ ಕಾರ್ಯಗಳಲ್ಲಿ ಹಾಗೂ ಸೇನೆಯ ಸೇವೆ ಮುಂತಾದವುಗಳಲ್ಲಿ ಖ್ಯಾತಿಯನ್ನು ಪ್ರಾಪ್ತಿಹೊಂದುತ್ತಾರೆ.ಈ ಜತಕವನ್ನು ವ್ಯಾಪಾರದಲ್ಲಿ ಕುಶಲನೆಂದು ಹೇಳಬಹುದು.ದೈನಿಕ ಕಾರ್ಯಗಳಲ್ಲಿ ವಿಚಾರಶೀಲ,ಧಾರ್ಮಿಕ ವೃಷ್ಟಭೂಮಿಯ ಸಮರ್ಥಕ ಮತ್ತು ಸ್ನೇಹಿತರ ಮಧ್ಯೆ ಮಿಥ್ಯಾಡಂಬರ ಪ್ರದರ್ಶಿಸುವವ ಅಥವಾ ಅತಿ ವಾದಿ ಹಾಗೂ ಜಂಬದ ಮಾತಿನಲ್ಲಿ ಪ್ರವೀಣನಾಗುತ್ತಾನೆ. ಇಂಥ ಜಾತಕನು ಶೀಘ್ರವಾಗಿ ಅನ್ನೆರ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾನೆ. ಉಪಕಾರ ಮತ್ತು ಸಾರ್ವಜನಿಕ ಹಿತ ಈತನ ಉದ್ದೇಶವಾಗಿರುತ್ತದೆ ಸೂರ್ಯನು ಈ ನಕ್ಷತ್ರದ ಮೇಲೆ ಆಷಾಡ ಮಾಸದ ಪ್ರಥಮ ವಾರ್ಯಂತ್ಯದವರೆಗೆ ಇರುತ್ತಾನೆ ಚಂದ್ರನು ಪ್ರತಿ 27ನೇ ದಿನ ಸುಮರು 13 ಗಂಟೆಗಳವರೆಗೆ ಈ ನಕ್ಷತ್ರದ ಮೇಲೆ ಬ್ರಾಹ್ಮಣ ಮಾಡುತ್ತಾನೆ.