ಚರಣ ಸ್ವಾಮಿ ಫಲ :
★ ಪ್ರಥಮ ಚರಣದ ಸ್ವಾಮಿ ಮಂಗಳ ಸೂರ್ಯ ಜಾತಕನನ್ನು ಅಧಿಕ ಹಠಮಾರಿ ಮತ್ತು ಅಹಂಕರಿ ಯನ್ನಾಗಿ ಮಾಡಿರುವರು.
★ದ್ವಿತೀಯ ಚರಣದ ಸ್ವಾಮಿ ಮಂಗಳ ಬುಧ ಮನಸ್ಸಿನಲ್ಲಿ ವಿಚಿತ್ರ ವಿಚಾರಗಳು ಜನ್ಮ ತಡೆಯುವಂತೆ ಮಾಡುವರು.
★ತೃತೀಯ ಚರಣದ ಸ್ವಾಮಿ ಮಂಗಳ ಶುಕ್ರ ಜಾತಕನಲ್ಲಿ ಆ ವೇಗ ಮತ್ತು ಪರಂಪರೆಯ ವಿರೋಧದಲ್ಲಿ ವೃದ್ಧಿಯುಂಟು ಮಾಡುವರು.
★ತೃತೀಯ ಚರಣದ ಸ್ವಾಮಿ ಮಂಗಳ ಮಂಗಳ ಆ ವೇಗವನ್ನು ಅಧಿಕ ಗೊಳಿಸುವನು.
ಮೃಗಶಿರಾ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :
ಇದರಲ್ಲಿ ಒಡವೆ ಕಳೆದರೆ ಮೂರು ದಿನಗಳಲ್ಲಿ ಪತ್ತೆಯಾಗುತ್ತದೆ.ಬೆಲ್ಲ ಸೇವಿಸಿ ಪೂರ್ವ ಮತ್ತು ಉತ್ತರ ದಿಕ್ಕಿನತ್ತ ಪ್ರಯಾಣ ಮಾಡಬಹುದು.ಇದರಲ್ಲಿ ಜ್ವರಾದಿ ರೋಗಗಳು ಉಂಟಾದರೆ ಶೀತ ವಾಗುವ ಭಯವಿರುತ್ತದೆ ಎಂಟು ದಿನ ಅಥವಾ ತಿಂಗಳು ಗ್ರಹಚಾರ ಪೀಡಿಸುತ್ತದೆ.ಇದಕ್ಕೆ ತಕ್ಕ ಶಾಂತಿ ಮಾಡಿಸಬೇಕು.
ಈ ನಕ್ಷತ್ರದಲ್ಲಿ ಗರ್ಭಧಾನ, ಶ್ರೀಮಂತ, ಅನ್ನಪ್ರಶನ, ಚೌಲ, ಅಕ್ಷರಭ್ಯಾಸ, ಶಾಸ್ತ್ರಾಭ್ಯಾಸ ಉಪನಯನ, ಸಮಾವರ್ತನ,ವಿವಾಹ, ನೂತನ ವಸ್ತ್ರಾಭರಣ, ಆಭರಣಧಾರಣ,ಕ್ಷೌರ, ಅಭ್ಯಂಜನ, ಮನೆಯ ನಿರ್ಮಾಣ,ಹೊಲಗೇಯುವುದು, ಬಿತ್ತನೆ, ಬಾವಿ ತೊಡಿಸುವುದು, ತೋಪು ಹಾಕಿಸುವುದು, ಪ್ರಯಾಣ ಹೊರಡುವುದು, ಔಷಧ ಸೇವನೆ, ಮಂತ್ರ ಜಪ,ದೇವರ ಉತ್ಸವ ರಾಜದರ್ಶನ,ಸ್ನೇಹ ಪರಿಚಯದ ಆರಂಭ, ಹೊಸಲೆಕ್ಕ ಬರೆಯುವುದು, ಜವಳಿ ಅಂಗಡಿ ಇಡುವುದು, ಹಸುವನ್ನು ಮನೆಗೆ ತರುವುದು, ಹೆಣ್ಣು ಮಕ್ಕಳನ್ನು ಕರೆತರುವುದು ಇತ್ಯಾದಿ ಶುಭ ಕಾರ್ಯಕ್ರಮಗಳನ್ನು ಮಾಡಬಹುದು.
ಈ ನಕ್ಷತ್ರದಲ್ಲಿ ಜನಿಸಿದವರು ಸೌಮ್ಯ ಸ್ವಭಾವದವರಾಗಿ ವೃದ್ಧಿ ಹೊಂದುವರು ಒಂದನೇ ಚರಣದಲ್ಲಿ ಹಾದರ,ಶರೀರ ಪುಷ್ಠಿ ಧನ, ಜಯಶಾಲಿಯಾಗುತ್ತಾರೆ.ಎರಡನೇ ಚರಣದಲ್ಲಿ ಪುರುಷ ಶಕ್ತಿ ಕಡಿಮೆ ಮೂರನೇ ಚರಣದಲ್ಲಿ ಧೈರ್ಯಶಾಲಿ, ಧಾರಾಳಿ,ಚೆಲುವ ಬುದ್ಧಿವಂತ ನಾಕನೇ ಚರಣದಲ್ಲಿ ಧನಹೀನ, ಜನದ್ವೇಷಿ, ಕಾಮುಕರ,ಮಕ್ಕಳೊಡನೆ ಶ್ರಮಪಟ್ಟು ಕೆಲಸಮಾಡಿ, ಅದು ಫಲಕ್ಕೆ ಬರುವಾಗ ಕೈ ಬಿಡುವುದು ತಲೆಹುಣ್ಣಿರುವವನ್ನು
ಈ ನಕ್ಷತ್ರಕ್ಕೆ ಮೊದಲು ಮಂಗಳ ದಿಶೆ ಏಳು ವರ್ಷ ಮಂಗಳ ಬುದ್ಧಿ ನಾಲ್ಕು ತಿಂಗಳು 27 ದಿನ 8ನೇ ತಿಂಗಳಲ್ಲಿ ಗೃಹ ದೋಷ ಹೊಟ್ಟೆ ಬೆನ್ನೆ ಒಂದು ವರ್ಷಕ್ಕೆ ರೋಗ. ಸ್ಥಳ ತಪ್ಪುತ್ತದೆ 50ನೇ ವರ್ಷದಲ್ಲಿ ಸಂಸಾರ ಸುಖಕ್ಕೆ ಭಂಗಗಳುಂಟಾಗುತ್ತವೆ, ಬಂಧುವಿಯೋಗವಾಗುತ್ತದೆ ಆರು ಏಳು ವರ್ಷಗಳ ಅಪವೃತ್ಯು ಕಳೆದರೆ 87 ವರ್ಷ ಆಯುಷ್ಯವಿರತ್ತದೆ ಹಿರಿಯರ ಹಿರಿಯರು ಮಾಡಿದ ಪುಣ್ಯದಿಂದ ಬಾಲ್ಯದಲ್ಲಿ ಅಪವೃತ್ಯುಗಳನ್ನು ಕಳೆಯಬೇಕು.ವರ್ತಮಾನದಲ್ಲಿ ಪಾಪ ಕರ್ಮಗಳನ್ನು ಮಾಡತ್ತ ಹೋದರೆ, ಆಯುಸ್ಸು. ಕ್ಷಿಣಿಸುತ್ತದೆ. ಸತ್ಯ, ದಾಯಾದಿ ಗುಣಗಳು ಆಯುಸ್ಸುನ್ನು ವೃದ್ಧಿಸುತ್ತದೆ.