ಮನೆ ಉದ್ಯೋಗ ಎಂಆರ್’ಪಿಎಲ್  ನೇಮಕಾತಿಗೆ ಅರ್ಜಿ ಆಹ್ವಾನ

ಎಂಆರ್’ಪಿಎಲ್  ನೇಮಕಾತಿಗೆ ಅರ್ಜಿ ಆಹ್ವಾನ

0

ಭಾರತದ ಅಗ್ರ ತೈಲ ಕಂಪನಿ ಒಎನ್ಜಿಸಿ ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್  ನೇಮಕಾತಿಗೆ ಮುಂದಾಗಿದೆ. ಪ್ರತಿಷ್ಟಿತ ಸಂಸ್ಥೆಯಲ್ಲಿ ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಇಲ್ಲಿದೆ. ಯಾವ ಹುದ್ದೆಯ ನೇಮಕಾತಿಗೆ ಆಹ್ವಾನಿಸಲಾಗಿದೆ. ವಿದ್ಯಾಭ್ಯಾಸ, ವಯೋಮಿತಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಂಬಂಧಪಟ್ಟ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ವವಿವರದ ಜೊತೆಗೆ ಈ ದಾಖಲೆಗಳನ್ನೂ ಸಲ್ಲಿಸಬೇಕು.  ಆಧಾರ್ ಕಾರ್ಡ್ನ ಪ್ರತಿ, ವಿದ್ಯಾರ್ಹತೆ ದಾಖಲೆಗಳ ಪ್ರತಿ ಹಾಗೂ  ಭಾವಚಿತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆನ್’ಲೈನ್ ಪೋರ್ಟಲ್ ತೆರೆಯುವ ದಿನಾಂಕ – 16-11-2022.

ಆನ್’ಲೈನ್’ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ – 11-12-2022.

ಸ್ಪೀಡ್ ಪೋಸ್ಟ್ / ಕೊರಿಯರ್ ಮೂಲಕ ಅರ್ಜಿಯ ಹಾರ್ಡ್ ಕಾಪಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ – 15-12-2022.

ಅರ್ಜಿ ಕಳುಹಿಸಲು ಪೋಸ್ಟಲ್ ವಿಳಾಸ

ಮಂಗಳೂರು ರಿಫೈನರಿ ಎಂದ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಕುತ್ತೆತ್ತೂರ ಅಂಚೆ, ಮಂಗಳೂರು -575030

ಅರ್ಜಿ ಸಲ್ಲಿಕೆ ಪ್ರಕ್ರಿಯೆ

1) ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

2) ರೆಸ್ಯೂಮ್ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

3) ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ  ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

ಹಿಂದಿನ ಲೇಖನಡಿಸೆಂಬರ್’ನಲ್ಲಿ 3 ಗ್ರಹಗಳ ಬದಲಾವಣೆ: ಈ 5 ರಾಶಿಗಳಿಗೆ ಒಳ್ಳೆಯ ಸಮಯ ಶುರು
ಮುಂದಿನ ಲೇಖನಚಿಲುಮೆ ಸಂಸ್ಥೆಗೆ ಗುರುತಿನ ಚೀಟಿ: ಮೂವರ ಅಮಾನತು