ಹಾದಿ ಬೀದಿಯ ಬೇಲಿಗುಂಟ ಬೆಳೆಯುವ ಬಳ್ಳಿ. ಬಹು ವರ್ಷ ಬಾಡದ ಮರಸುತ್ತು ಬಳ್ಳಿ. ಅವರೆ ಎಲೆಯಾಕಾರದ ಮೂರು ಉಪ ಎಲೆಯಾಕಾರದ ಮೂರು ಉಪ ಎಲರು ಸಂಯುಕ್ತ ಎಲೆ.
ನೀಲಿ ಹೂ, ಎಸ್ ಆಕಾರದ ಚಪ್ಪಟೆ ಕಾಯಿ ಸಿಪ್ಪೆ ತುಂಬ ಬಿರುಸು ಚುಚ್ಚು ಕೂದಲು ಅಂಗಿ, ಒಳಗೆ ಕರಿ ಬಣ್ಣದ ಅವರೆ ಬೀಜ ದಾಕಾರದ ದುಂಡನೆ ಬೀಜ. ಹೊರ ಕವಚ ಹೊಳೆಯುವ ಕಪ್ಪು, ದಪ್ಪ ಕೂಡ. ಒಳಗೆ ಎರಡು ದಳಗಳು. ಬಿಳಿ ಮತ್ತು ಕರಿ ಬೀಜದ ಎರಡು ಪ್ರಕಾರಗಳಿರುತ್ತದೆ. ಕೂದಲುಗಳಿರುವ ಕರಿಬೀಜದ ಪ್ರಕಾರ ಮತ್ತು ಕೂದಲು ಇಲ್ಲದ ಬಿಳಿ ಬೀಜದ ಪ್ರಕಾರಗಳನ್ನು ಎಳೆಯದಿದ್ದರೆ ರೋಮ ಸವರಿ ತರಕಾರಿಯಂತೆ ಬಳಸುವ ಪದ್ಧತಿ ಇದೆ. ಬಲಿತ ಬೀಜ ಹುರಿದು ಪುಡಿ ಮಾಡಿಡುವರು. ಹಾಲಿನೊಂದಿಗೆ ಬೇಯಿಸಿ ಕುಡಿದರೆ ಶಕ್ತಿ ವರ್ಧಕ ಅತ್ಯುತ್ತಮ ಟಾನಿಕ್, ವೀರ್ಯವರ್ಧಕ ಸಹ ಆಗಿದೆ.
ಔಷಧೀಯ ಗುಣಗಳು :-
- ಬೇರು ಪುಡಿ ಸಂಗಡ ಶುಂಠಿ, ಮೆಣಸು ಹಾಕಿ ಕಾಯಿಸಿದ ಕಷಾಯ ಕುಡಿಸಿದರೆ ಮುಖ ಸೊಟ್ಟಗಾಗುವ ವಾತ, ನರದೌರ್ಬಲ್ಯ ತೊಂದರೆಗಳಿಂದ ಪರಿಹಾರ ಸಿಗುತ್ತದೆ.
*ಬೀಜದ ಪುಡಿಯನ್ನು ತುಪ್ಪದಲ್ಲಿ ಹುರಿದು ಸೇವಿಸುವರು. ಉತ್ತಮ ಪುಷ್ಟಿಕಾರಕ, ಲೈಂಗಿಕ ಸಾಮರ್ಥ್ಯಾವನ್ನು ಹೆಚ್ಚಿಸುತ್ತದೆ. - ಕಾಯಿಯ ಹೊರಗಿನ ಕೋದಲನ್ನು ತುಪ್ಪ, ಬೆಲ್ಲ, ಜೇನಿನ ಸಂಗಡ ಪಾಕಮಾಡಿ ಉಂಡೆಮಾಡಿ ತಿನ್ನಬೇಕು. ಜಂತು ತೊಂದರೆ ಪರಿಹಾರಕ ಇದು. ಉಂಡೆ ತಿನ್ನಿಸಿ ಹರಳೆಣ್ಣೆ ಕುಡಿಸಬೇಕು.
*ಸೋಲುತ್ತಿರುವ ಮೂತ್ರ ಪಿಂಡಗಳಿಗೆ ಬೇರಿನ ಕಷಾಯ ಉತ್ತಮ ಪರಿಹಾರವಾಗಿದೆ.
*ರಕ್ತ ಬೇಧಿಯನ್ನು ಬೇರಿನ ಪುಡಿ ನಿಲ್ಲಿಸುತ್ತದೆ.