ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಮಹತ್ವದ ಘಟ್ಟ ತಲುಪಿದ್ದು, ಇದೀಗ ಪ್ರಕರಣದ ಎ4 ದೇವರಾಜುಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತೆ ನೋಟಿಸ್ ನೀಡಿದ್ದಾರೆ.
ಸ.ನಂ 464ರ ಜಮೀನು ಮಾಲೀಕರಾಗಿರುವ ದೇವರಾಜುವನ್ನು ಹಿಂದೆ ಲೋಕಾಯುಕ್ತ ಅಧಿಕಾರಿಗಳು ಪೂರ್ತಿ ದಿನ ದೇವರಾಜು ವಿಚಾರಣೆಗೊಳಪಡಿಸಿದ್ದರು. ಇದೀಗ ಮತ್ತೊಮ್ಮೆ ಎರಡನೇ ಬಾರಿಗೆ ದೇವರಾಜುಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಹಿಂದಿನ ಮುಡಾ ಆಯುಕ್ತ ಕಾಂತರಾಜು ಹಾಗೂ ಮಾಜಿ ಅಧ್ಯಕ್ಷ ಡಿ ಧೃವಕುಮಾರ್ ಗೂ ನೋಟಿಸ್ ನೀಡಲಾಗಿದೆ. ಧೃವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡಲು ಆದೇಶ ಮಾಡಿದಾಗ ಅಧ್ಯಕ್ಷರಾಗಿದ್ದರು. ಡಿ ಧೃವಕುಮಾರ್ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು ಇವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.