ಮೈಸೂರು : 50:50 ಅನುಪಾತದಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಿಂಪಡೆದಿತ್ತು. ಮುಡಾದ ಈ ನಿರ್ಧಾರದಿಂದ ನಿವೇಶನ ಪಡೆದವರಿಗೆ ಸಂಕಷ್ಟ ಶುರುವಾಗಿದೆ. ಇನ್ನು, ಮುಡಾ ಹಂಚಿಕೆ ಮಾಡಿದ್ದ 211 ನೀವೇಶನ ಪಟ್ಟಿ ಲಭ್ಯವಾಗಿದೆ.
ಒಟ್ಟು 241 ನಿವೇಶನ ಮಂಜೂರಾಗಿದ್ದು, ಇದರಲ್ಲಿ 211 ನಿವೇಶನಗಳ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಅಬ್ದುಲ್ ವಾಜಿದ್ ಎಂಬುವರಿಗೆ 26 ನಿವೇಶನ ಮಂಜೂರು ಮಾಡಲಾಗಿದೆ. ಯಾವತ್ತೋ ವಶಪಡಿಸಿಕೊಂಡ ಭೂಮಿಗಳಿಗೆ 2020 ರಿಂದ 2023ರ ಅವಧಿಯಲ್ಲಿ ಆಯುಕ್ತರ ತೀರ್ಮಾನದಂತೆ ಸೈಟ್ ಹಂಚಿಕೆ ಮಾಡಲಾಗಿದೆ.
ಮುಡಾ 50-50 ನಿಯಮದಡಿ ಸೈಟ್ ಪಡೆದವರ ಪಟ್ಟಿ
ಎಂ.ಸಿ.ಪದ್ಮಾ ಮಕ್ಕಳಾದ ಬ್ರಿಜೇಸ್ ಅರಸ್ – 5
ಸುಶೀಲ ಮಕ್ಕಳಾದ ಸುಮಂತ್ ಅರಸ್, ಜಯಂತ್ ಅರಸ್ – 6
ಮನು ಅರಸ್, ಜಯಂತ್, ಅರ್ಚನಾ, ಸುಮಂತ್ – 4
ಪೊ.ಮಹದೇವ್ ಮತ್ತು ಗೀತಾ – 12
ಅಬ್ದುಲ್ ವಾಜಿದ್ – 26
ಸೈಯದ್ ಯುಸಫ್ – 21
ರೂಪ – 3
ಪ್ರೇಮಾ- 2
ಕನಕ -3
ಲೋಕೇಶ್- 2
ರವಿ – 2
ನಿಂಗಪ್ಪ- 2
ಲಕ್ಷಿ- 1
ವೈರಮುಡಿ- 7
ಮಲ್ಲಪ್ಪ- 19
ಸುರೇಶಮ್ಮ- 11
ಮಹದೇವಮ್ಮ -1
ವಿಶಕಂಠ – 4
ಸಿದ್ದಯ್ಯ – 4
ಕಮಲಮ್ಮ – 1
ಕೆ.ಪಿ.ಶಿವಪ್ರಸಾದ್ – 1
ಸೈಯದ್ ನುಸ್ರುತ – 4
ವೈಶಾಲಿ – 1
ಪ್ರವೀಣ್ – 2
ಸಿ.ಕೆ.ಬಾಸ್ಕರ್ – 1
ಸಿ.ಜೆ.ರಾಜರಾಮ್ – 1
ಚೌಡಯ್ಯ – 7
ಕ್ಯಾಥಡ್ರಲ್ ಸೊಸೈಟಿ ಕಾರ್ಯದರ್ಶಿ ಅಲಮೇಡಾ – 6
ಸುನಂದ – 1
ಎಸ್.ಜಿ. ಶಿವಶಂಕರ್ – 1
ಕೆ.ರಘುವೀರ್ ಕಾಮತ್ – 1
ವಿಮಲಾ – 1
ನಾಗರತ್ನ – 1
ವೆಂಕಟಪ್ಪ – 17
ದೇವಮ್ಮ – 16
ಆಲನಹಳ್ಳಿ ಗೃಹನಿರ್ಮಾಣ ಸಹಕಾರ ಸಂಘ-ಅಧ್ಯಕ್ಷ/ಕಾರ್ಯದರ್ಶಿ – 13 ನಿವೇಶನ ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕ ತಂದಿಟ್ಟಿರುವ ಮುಡಾ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಜುಲೈನಲ್ಲಿ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಆಯೋಗ ರಚಿಸಿದ್ದು, ಅವರಿಗೆ ವರದಿ ಸಲ್ಲಿಕೆಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.