ಮನೆ ರಾಜ್ಯ ಮುಸ್ಲಿಮರು ಇಲ್ಲದ ಗ್ರಾಮದಲ್ಲಿ ಮೊಹರಂ ಆಚರಣೆ

ಮುಸ್ಲಿಮರು ಇಲ್ಲದ ಗ್ರಾಮದಲ್ಲಿ ಮೊಹರಂ ಆಚರಣೆ

0

ಬಾಗಲಕೋಟ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರು ಇಲ್ಲದೇ ಇದ್ದರು ಕೂಡ ತಲೆತಲಾಂತರಗಳಿಂದ ಇಲ್ಲಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ.

Join Our Whatsapp Group

ಯಾವುದೇ ಜಾತಿ ಬೇಧವಿಲ್ಲದೆ ಗ್ರಾಮದಲ್ಲಿರುವ ಸಾವಿರಕ್ಕೂ ಅಧಿಕ ಜನಸಂಖ್ಯೆ ಮೊಹರಂ ಆಚರಣೆಯನ್ನು ಆಚರಿಸುವುದು ಇಲ್ಲಿನ ಸಂಪ್ರದಾಯವಾಗಿದೆ.

ಗ್ರಾಮದಲ್ಲಿ ಮುಸ್ಲಿಂ ಸಮುದಾಯ ಇಲ್ಲದೇ ಇರುವುದರಿಂದ ಪಕ್ಕದ ಕುಲಹಳ್ಳಿ ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಆಗಮಿಸಿ, ಮುಸ್ಲಿಂ ಸಾಂಪ್ರದಾಯಿಕ ಆಚರಣೆಯನ್ನು ಹಿಂದೂಗಳೊಂದಿಗೆ ಆಚರಿಸುತ್ತಿರುವುದು ಕೂಡ ತಲೆಮಾರಿನಿಂದ ಬಂದಂತಹ ಪದ್ಧತಿಯಾಗಿದೆ.

ಹಾಗಾಗಿ ಭಾವೈಕ್ಯತೆಯ ಗ್ರಾಮವಾಗಿ ಬಂಡಿಗಣಿ ಗ್ರಾಮವು ಹೆಸರುವಾಸಿಯಾಗಿದೆ. ಅಂತೆಯೆ ಮೊಹರಂ ಹಿನ್ನಲೆಯಲ್ಲಿ ಹಬ್ಬದ ಕೊನೆಯ ದಿನದಂದು ಮಾಡಲಾಗುವ ಸಾಂಪ್ರದಾಯಿಕ ಎಲ್ಲಾ ಪದ್ಧತಿಗಳು ಇಲ್ಲಿ ಮಾಡಲಾಯಿತು.