ಶ್ಲೋಕ :
ಹಸ್ತತ್ರಯೆ ಮಘಾಪುಷ್ಯೆತ್ರ್ಯುತ್ತರೆ ರೋಹಿಣಿದ್ವಯೆ
ಧನಿಷ್ಠಾ ರೇವತಿ ಯುಗ್ಮೆತಥಾ ಮೂಲಾನುರಾಧಯೋ
ಶುಭೆವಾರೆ ತಿಥೌ ಬೀಜೋಪ್ತಿಶ್ಚತುರೇಣ ಚ||
ಅರ್ಥ : ಹಸ್ತ, ಚಿತ್ತ, ಸ್ವಾತಿ, ಮಘಾ, ಪುಷ್ಯ,ಉತ್ತರಾ,ಉತ್ತರಾಷಾಢ ಉತ್ತರಾಭಾದ್ರಪದ,ರೋಹಿಣಿ, ಮೃಗಶಿರ, ಧನಿಷ್ಠ,ರೇವತಿ, ಅಶ್ವಿನಿ,ಮೂಲಾ ಮತ್ತು ಅನುರಾಧ ಈ ನಕ್ಷತ್ರಗಳಲ್ಲಿ ಶುಭವಾರ ಮತ್ತು ಮಂಗಳವಾರ ಶುಭ ತಿಥಿಯಲ್ಲಿ ಸರ್ವ ಪ್ರಕಾರದ ಒಳ್ಳೇ ಬೀಜಗಳನ್ನು ಬಿತ್ತುವದು ಶುಭಕರವು. ರವಿವಾರ, ಮಂಗಳವಾರಗಳಲ್ಲಿ ಕೆಂಪು ವರ್ಣದ ಧಾನ್ಯಗಳನ್ನೂ, ಸೋಮವಾರ ಶುಕ್ರವಾರಗಳಲ್ಲಿ ಬಿಳೇ ವರ್ಣದ ಧಾನ್ಯಗಳನ್ನೂ ಬುಧವಾರ ಗುರುವಾರಗಳಲ್ಲಿ ಹಳದಿ ಅಥವಾ ಹಸಿರು ವರ್ಣದ ಧಾನ್ಯಗಳನ್ನು ಶನಿವಾರ ಕಪ್ಪು ಬಣ್ಣದ ಧಾನ್ಯಗಳನ್ನು ಬಿತ್ತುವದು ಒಳ್ಳೆಯದು.
ಬೀಜಗಳನ್ನು ಬಿತ್ತಲು ಹೋಗುವ ಪ್ರಾರಂಭದಲ್ಲಿ ಒಕ್ಕಲಿಗರು ನಸುಕಿನಲ್ಲಿ ಬೇಗನೇ ಎದ್ದು ಶುಚಿರ್ಭೂತವಾಗಿ ಸ್ನಾನ ಮಾಡಿ ಭಸ್ಮವನ್ನು ಧರಿಸಿಕೊಂಡು ತನ್ನ ಆರಾಧ್ಯ ದೈವವನ್ನೂ ಭಕ್ತಿಯಿಂದ ಪೂಜಿಸಿ ಶುಚಿರ್ಭತ ಮನಸ್ಸಿನಿಂದಿದ್ದು ಯಾರೊಡನೆಯೂ ದುರ್ಭಾಷೆಗಳನ್ನಾಡದೇ ಆಡದೇ ಜಗಳವಾಡದೇ ಹಾಲು ತುಪ್ಪ ಅನ್ನ ಮೊಸರು ಮಾತ್ರ ಊಟ ಮಾಡಿಕೊಂಡು ಎರಡು ತೆಂಗಿನ ಕಾಯಿಗಳನ್ನು ಹಾಗೂ ಹೊಲದಲ್ಲಿ ನಾಲ್ಕು ದಿಕ್ಕುಗಳಲ್ಲಿ ಬಲಿ ಕೊಡಲಿಕ್ಕೆಂದು ಅನ್ನವನ್ನು ತೆಗೆದುಕೊಂಡು ಹೊಲಕ್ಕೆ ಹೋಗಿ ಬಿತ್ತುವ ಕೊರಿಗೆಯನ್ನು ವಿಭೂತಿ ಗಂಧ ಅಕ್ಷತೆ ಪ್ರತಿ ಪುಷ್ಪಾದಗಳಿಂದ ಪೂಜಿಸಿ,ತೆಂಗಿನಕಾಯಿಗಳನ್ನು ಕೋರಿಗೆಗೆ ಒಡೆದು ಅನ್ನವನ್ನು ನೈವೇದ್ಯ ಮಾಡಿ ಹೊಲದ ನಾಲ್ಕೂ ದಿಕ್ಕುಗಳಿಗೆ ಅನ್ನದ ಬಲಿಯನ್ನು ಕೊಟ್ಟು ಕೂರಿಕೆಗೆ ಹಾಗು ಎತ್ತುಗಳಿಗೆ ಭಕ್ತಿಯಿಂದ ನಮಸ್ಕರಿಸಬೇಕು.ಈ ಬಲಿ ಹಾಕಿದ ಅನ್ನಕ್ಕೆ ಕಾಗೆಗಳು ತೀವ್ರ ಬಂದರೆ ಆ ವರ್ಷ ಬೆಳೆಯು ಚೆನ್ನಾಗಿ ಬರುವುದೆಂದು ತಿಳಿಯಬೇಕು.
ಬಿತ್ತಲಿಕ್ಕೆ ಓಡುವ ಎತ್ತುಗಳ ವಿವರ :
ಬುಧ, ಗುರು, ಶುಕ್ರ, ಸೋಮವಾರಗಳಲ್ಲಿ ಕೂರಿಗೆಗೆ ಬಿಳುಪು ವರ್ಣದ ಎತ್ತನ್ನು ಬಲಕ್ಕೆ ಕಟ್ಟಬೇಕು. ಆದಿತ್ಯವಾರ ಮಂಗಳವಾರ ಕೆಂಪು ಬಣ್ಣದ ಎತ್ತನ್ನು ಬಲಕ್ಕೆ ಕಟ್ಟಬೇಕು. ಎಡಭಾಗಕ್ಕೆ ಯಾವ ವರ್ಣದ ಎತ್ತು ಕಟ್ಟಿದರೂ ಅಡ್ಡಿಯಿಲ್ಲ. ಈ ಪ್ರಕಾರ ಬಿತ್ತುವ ಕೆಲಸ ಮುಗಿಯುವವರೆಗೂ ನಡೆಸಿದರೆ ಅತ್ಯಂತ ಶ್ರೇಷ್ಠವು.ಇದಾಗದಿದ್ದರೆ ಪ್ರಾರಂಭದಲ್ಲಿ ಒಂದು ದಿನವಾದರೂ ಈ ನೇಮದಂತೆ ಎತ್ತುಗಳನ್ನು ಕಟ್ಟಬೇಕು.ಇದಲ್ಲದೆ ಬಿತ್ತಲು ಪ್ರಾರಂಭಿಸುವ ದಿನ ಕೂರಿಗೆಗೆ ಕಟ್ಟತಕ್ಕ ಎತ್ತುಗಳೆರಡೂ ಕಿವಿಗಳು ಹರಿದುರೋಣ, ಕೊಡು ಮುರಿದಿದೋಣ ರೋಗದಿಂದ ನಳುತ್ತಿರೋಣ,ಕಣ್ಣುಗಳಿಗೆ ಧಕ್ಕೆ ಆಗಿರೋಣ,ಹೀಗೆ ಇರಬಾರದು. ಈ ಬಿತ್ತುವ ಕಾರ್ಯ ಆರಂಭಿಸುವ ಕೃಷಿಕನೂ ಇಂಥವನೇ ಇರಬೇಕು. ಈ ರೀತಿ ಎಲ್ಲ ನೇಮಕವನ್ನು ಅನುಸರಿಸಿ ಸದಾ ಕೃಷಿ ಕಾರ್ಯ ಕೈಗೊಳ್ಳುವವರಿಗೆ ಕಾರ್ಯ ಸಾಧಿಸುವುದಾದರೆ ದುರ್ಭಿಕ್ಷದ, ಕಳುವಾಗುವ ಭಯ ಖಂಡಿತ ಇರಬಾರದು.















