ಮನೆ ಜ್ಯೋತಿಷ್ಯ ಧಾನ್ಯಗಳನ್ನು ಕೊಯ್ಯಲಿಕ್ಕೆ (ಕುಡಗೋಲು  ಹಾಕಲಿಕ್ಕೆ) ಮುಹೂರ್ತ

ಧಾನ್ಯಗಳನ್ನು ಕೊಯ್ಯಲಿಕ್ಕೆ (ಕುಡಗೋಲು  ಹಾಕಲಿಕ್ಕೆ) ಮುಹೂರ್ತ

0

 ಶ್ಲೋಕ  :

 ಪೂರ್ವೋತ್ತರಾ ಮಘಾಶ್ಲೇಷಾ ಜ್ಯೇಷ್ಠಾರ್ದಾಶ್ರವಣದ್ವಯೆ

 ಭರಣೀ ದ್ವಿತಯೇ ಮೂಲೆ ಮೃಗೆ ಪುಷ್ಯೆ ಕರತ್ರಯೆ||

 ಧಾನ್ಯಚ್ಛೇದಃ  ಶುಭೋರಿಕ್ತಾಂ ಹಿತ್ವಾಭೌಮ ಶನೈಶ್ಚಕಾ||

 ಅರ್ಥ : ಹುಬ್ಬ,

Join Our Whatsapp Group

ಪೂರ್ವಷಾಢ, ಪೂರ್ವಭಾದ್ರ, ಉತ್ತರ, ಮಘ, ಆಶ್ಲೇಷ, ಷಮಜ್ಯೇಷ್ಠ ಆರಿದ್ರ, ಶ್ರಾವಣ ದನಿಷ್ಠ, ಭರಣಿ, ಕೃತಿಕಾ, ಮೂಲ, ಮೃಗಶಿರ, ಪುಷ್ಯ, ಹಸ್ತ, ಚಿತ್ತ, ಸ್ವಾತಿ ಈ ನಕ್ಷತ್ರಗಳಲ್ಲಿ 4-9-14 ಈ ರಿಕ್ತ ತಿಥಿಗಳನ್ನೂ ಮಂಗಳವಾರ ಶನಿವಾರಗಳನ್ನು ಬಿಟ್ಟು ಇನ್ನುಳಿದ ತಿಥಿ ವಾರಗಳಲ್ಲಿ ಹೊಲಗಳಲ್ಲಿಯ ಪೈರನ್ನು ಕುಯ್ಯಲಿಕ್ಕೆ  ಪ್ರಾರಂಭಿಸಿದರೆ ಶುಭವು.

 ಹೊಲದಲ್ಲಿ ಕಾಣಾ ಮಾಡುವ ನೇಮ :

        ಹೊಲದಲ್ಲಿ ಸಮಾನಾದ ಭೂಮಿಯನ್ನು ನೋಡಿ, ಹಣ ಮಾಡಲು ಬೇಕಾಗುವಷ್ಟು ಭೂಮಿಯನ್ನು ಒಂದು ಪೂಟು ಪ್ರಮಾಣದಲ್ಲಿ ನೆಲವನ್ನು ಅಗಿದು ಭೂಮಿಯನ್ನು ಘಟ್ಟಿಗೊಳಿಸಿ ನಂತರ ಭೂಮಿಯ ಮಧ್ಯದಲ್ಲಿ ಬಸರಿ ಆಲ ಮುಂತಾದ ರಸ ಹೆಚ್ಚು ಇರತಕ್ಕ ಗಿಡಿದ ಬೊಡ್ಡೆಯನ್ನು ನಿಲ್ಲಿಸಬೇಕು. ನಂತರ ಆ ಸ್ಥಳವನ್ನು ಆ ಕಳ ಮತ್ತು ಎತ್ತುಗಳ ಹೆಂಡಿಯಿಂದಲೇ ಕಾರಣ ಮಾಡಬೇಕು.

 ಕಣಾ ಮಾಡಲಿಕ್ಕೆ ಹಾಗೂ ಹಂತೀ ಕಟ್ಟುವ ನಕ್ಷತ್ರ :

 ಶ್ಲೋಕ  :

 ಅನುರಾಧಾ ಶ್ರವೋಮೂಲೇ ರೇವತ್ಯಾಂಚ ಮಘಾತ್ರಿಭೇ|

 ಜ್ಯೇಷ್ಠಾಯಾಂಚೈವ ರೋಹಿಣ್ಯಾಂಶುಭಂಸ್ಯಾತ್ ಕಣಮರ್ದನಂ||

 ಅರ್ಥ : ಅನುರಾಧ, ಶ್ರಾವಣ,ಮೂಲ, ರೇವತಿ, ಮಘ, ಹುಬ್ಬ, ಉತ್ತರ, ಜೇಷ್ಠ, ರೋಹಿಣಿ ಈ ಒಂಭತ್ತು ನಕ್ಷತ್ರಗಳಲ್ಲಿ ಕಣದಲ್ಲಿಯ ತೆನೆ ವಗೈರೆ ತುಳಿಸುವದಕ್ಕೆ ಪ್ರಾರಂಭಿಸಿದರೆ ಕಾಳುಗಳು ಹುಲುಸಾಗುವವು ಶುಭ ಉಂಟಾಗುವುದು.

   ಸಕಲ ಗಿಡ ಬಳ್ಳಿಗಳನ್ನು ಹಚ್ಚಲಿಕ್ಕೆ :

 ಸೋಮವಾರ, ಗುರುವಾರ, ಶುಕ್ರವಾರಗಳಲ್ಲಿಯೂ ಚಿತ್ತಾ, ಸ್ವಾತಿ,ಉತ್ತರಾಷಾಢ, ಮೂಲ, ಧನಿಷ್ಠ, ರೋಹಿಣಿ,ಮೃಗಶಿರ, ಪುಷ್ಯ, ಅಶ್ವಿನಿ, ಅನುರಾಧಾ ಈ ನಕ್ಷತ್ರಗಳಲ್ಲಿಯೂ, ಶುಭ ತಿಥಿಗಳಲ್ಲೂ ಉತ್ತಮ.ಅಲ್ಲದೆ ಆಶ್ಲೇಷ ನಕ್ಷತ್ರ ಸೋಮವಾರ ಲಗ್ನದಲ್ಲಿ ಬಲಿಷ್ಠನಾದ ಚಂದ್ರನಿರುವ ಸಮಯದಲ್ಲಿ ತೆಂಗಿನ ಸಸಿಗಳನ್ನು ಹಚ್ಚಬೇಕು. ಎಲೆ ಬಳ್ಳಿಗಳನ್ನು ಲಗ್ನದಲ್ಲಿ ಗುರು ಇರುವ ವೇಳೆಯಲ್ಲಿ ಹಚ್ಚಿದರೆ ಅಭಿವೃದ್ಧಿಯು.

 ರಾಶಿಯನ್ನು ಮನೆಗೆ ತರಲಿಕ್ಕೆ  :

 ಅಶ್ವಿನಿ, ಅನುರಾಧ,ಶ್ರಾವಣ, ಪುಷ್ಯ ಹಸ್ತ, ಮೂಲ, ಮೃಗಶಿರ, ಚಿತ್ತ,ರೇವತಿ, ಧನಿಷ್ಠ, ಶತತಾರ, ಪುನರ್ವಸು, ಉತ್ತರ, ಉತ್ತರಾಷಾಢ, ಉತ್ತರಾಭಾದ್ರ, ರೋಹಿಣಿ ಈ ನಕ್ಷತ್ರಗಳಲ್ಲಿ 4-9- 14 – 30 ಈ ತಿಥಿಗಳನ್ನು ಹಾಗೂ ಶನಿವಾರ ಮತ್ತು ಮಂಗಳವಾರ ಗಳನ್ನು ಬಿಟ್ಟು ಉಳಿದ ತಿಥಿ ವಾರಗಳಲ್ಲಿ ರಾಶಿಯನ್ನು ಮನೆಗೆ ತರಬೇಕು.