ಮನೆ ಯೋಗಾಸನ ಮೂಲ ಬಂಧಾಸನ

ಮೂಲ ಬಂಧಾಸನ

0

 ‘ಮೂಲ’ವೆಂದರೆ ಬುಡ, ಬುನಾದಿ,ತಳಹದಿ. ‘ಬಂಧ’ವೆಂದರೆ ಕಟ್ಟು ಸಂಕೋಲೆ .

 ಅಭ್ಯಾಸ ಕ್ರಮ :

1. ಮೊದಲು ಬದ್ಧಕೋನಾಸನ ದ ಭಂಗಿಯಲ್ಲಿ ಕುಳಿತುಕೊಳ್ಳಬೇಕು.

2. ಬಳಿಕ,ತೊಡೆ ಮತ್ತು ಮೀನ ಖಂಡಗಳ ನಡುವೆ ಕೈಗಳನ್ನು ತೂರಿಸಿ ಆಯಾ ಕೈಗಳಿಂದ ಆಯಾ ಪಾದಗಳನ್ನು ಹಿಡಿದುಕೊಳ್ಳಬೇಕು.

3. ಆಮೇಲೆ ಅಂಗಾಲು ಹಿಮ್ಮಡಿಗಳನ್ನು ಒಂದಕ್ಕೊಂದು ಜೋಡಿಸಬೇಕು. ಬಳಿಕ ಹಿಮ್ಮಡಿಗಳೆರಡನ್ನಕ ಮೇಲೆತ್ತಿ ಕಾಲ್ಬೆರಳುಗಳನ್ನು ನೆಲದ ಮೇಲೆ ಒರಗಿಸಿಟ್ಟು ಪಾದಗಳನ್ನೆಳೆದು ಅವುಗಳನ್ನು ಗುದಗುಹ್ಯಗಳ ನಡುತಾಣಕ್ಕೆ ಸೇರಿಸಬೇಕು.

4. ಈ ಭಂಗಿಯಲ್ಲಿ ನಿಂತು.ಕೈಗಳನ್ನು ಸರಿಸಿ ಅಂಗೈಗಳನ್ನು ಟೊಂಕದ ಹಿಂಬದಿಗೆ ಒತ್ತಿಡಬೇಕು.

5. ಆ ಬಳಿಕ,ಕೈಗಳ ನೆರವಿನಿಂದ ದೇಹವನ್ನು ನೆಲದಿಂದ ಮೇಲೆತ್ತಿ ಟೊಂಕಗಳನ್ನು ಮುಂಗಡಗೆ ಸರಿಸಿ ಜೊತೆಯಲ್ಲಿಯೇ ಪಾದಗಳನ್ನೂ ಮಂಡಿಗಳನ್ನು ತಿರುಗಿಸಿ ಆ ಮೂಲಕ ತಾನು ಚಲಿಸದೆಯೇ ಹಿಮ್ಮಡಿಗಳನ್ನು ಮುಂದೂಡಬೇಕು.

6. ಇದಾದಮೇಲೆ, ದೇಹವನ್ನು ಕಾಲ್ಬೆಬೆರಳುಗಳು ಮತ್ತು ಮಂಡಿಗಳ ಮೇಲೆ ನಿಲ್ಲಿಸಿ ಈ ಭಂಗಿಯಲ್ಲಿ ಆಳವಾದ ಉಸಿರಾಟದಿಂದ ಸುಮಾರು 30 60 ಸೆಕೆಂಡುಗಳ ಕಾಲ ನೆಲೆಸಬೇಕು.

7. ಕೊನೆಯದಾಗಿ ಈ ಭಂಗಿಯನ್ನು ಸಡಿಲಗೊಳಿಸಲು ಕೈಗಳನ್ನು ಮುಂಗಡೆಗೆ ಸರಿಸಿ ದೇಹದ ಭಾರವನ್ನೆಲ್ಲ ಅವುಗಳೀಗೆ ವಹಿಸಬೇಕು ಆಮೇಲೆ ಮುಂಡವನ್ನು ಮೇಲೆತ್ತಿ ಹಿಮ್ಮಡಿಗಳನ್ನು  ತಿರುಗಿಸಿ ಬಳಿಕ ಕಾಲುಗಳನ್ನು ನೇರವಾಗಿ  ಮಿಶ್ರಮಿಸಿಕೊಳ್ಳಬೇಕು. ಈ ಭಂಗಿಯನ್ನು ಸಡಿಲಿಸುವಾಗ ಕಾಲುಗಳ ಮೇಲೆ ಯಾವ ಭಾರವನ್ನೂ ಹೊರಿಸಬಾರದು.

 ಪರಿಣಾಮಗಳು 

     ಈ ಆಸನವು ‘ಮೂಲಧಾರ ಚಕ್ರ’ಕ್ಕೂ ಜನನೇಂದ್ರಿಯಗಳಿಗೂ ಪ್ರಾಸ್ಟೇಟ್ ಗ್ರಂಥಿಗೂ ಉತ್ತಮವಾದ ವ್ಯಾಯಾಮವನ್ನೊದಗಿಸುತ್ತದೆ ಅಲ್ಲದೆ ಈ ಆಸನಾಭ್ಯಾಸವು ಮಿತಿಮೀರಿದ ಮೈಥುನದ ಬಯಕೆಯನ್ನು ತಡೆಗಟ್ಟಿ, ಅಂದರೆ ಇಂದ್ರಿಯನಿಗ್ರಹಕ್ಕೆ ನೆರವಾಗಿ ದೇಹ ಸಾಮರ್ಥ್ಯವನ್ನುಳಿಸುವ ಸಹಾಯಕವಾಗುವುದು.ಈ ಕಾರಣದಿಂದ ಇದು ಮನೋ ವ್ಯಾಪಾರದ ಮೇಲೆ ಹತೋಟಿಯನ್ನು ಗಳಿಸಿ ಮನಸ್ಸಿಗೆ ಶಾಂತಿಯನ್ನೊದಗಿಸುತ್ತದೆ.

      ಅಂದರೆ ‘ಮನ’ಸ್ಸು ಇಂದ್ರಿಯಗಳಿಗೆ ಪ್ರಭು ಪ್ರಾಣವೆಂಬುದು ಈ ಮನಸ್ಸಿಗೆ ಒಡೆಯ ;ಈ ಪ್ರಾಣಕ್ಕೆ ಮನೋ‘ಲಯ’ ವೆಂಬುದೇ ರಾಜ ಇಥ ಮನೋಲಯವು ‘ನಾದ’ವನ್ನು  ಅವಲಂಬಿಸಿದೆ ಈ ಬಗೆಯಿಂದ ಮನೋಲಯವನ್ನು ಸಾಧಿಸಿದೆವೆಂದರೆ ‘ಮೋಕ್ಷ’ವನ್ನು ಗಳಿಸಿದಂತೆಯೇ ಸರಿ. ಆದರೆ ಕೆಲವರ ಅಭಿಪ್ರಾಯದಂತೆ ಈ ಭಂಗಿಯಲ್ಲಿ ಮುಕ್ತಿ ಸಾಧನೆಯಾಗದು.ಮನಸ್ಸೂ ಪ್ರಾಣವೂ ಲಯಸ್ಥಿತಿಯನ್ನು ಹೊಂದಿತೆಂದರೆ ಆಗ ಯಾವುದೋ ಒಂದು ವಿವರಿಸಲಾಗದ ‘ಆನಂದ’ ಉದಿಸುತ್ತದೆ ಎಂಬುದು ಅವರ ವಾದ.

      ಮೈಥುನಸುಖದ ಹೆಬ್ಬಯಕೆಯುಳ್ಳವರ  ಮನೋ ವ್ಯಾಪಾರವನ್ನು ತಡೆಗಟ್ಟಲು ‘ಬದ್ಧ ಕೋನಾಸನ’ ಮತ್ತು ಈ ‘ಮೂಲ ಬಂಧಾಸನ’ಗಳು ಅತ್ಯಂತ ಪರಿಣಾಮಕಾರಿ ಮೈಥುನದ ಆಸೆಯನ್ನು ಕುಂದಿಸಿದರೆ ಅದರಿಂದ ಚೈತನ್ಯಶಕ್ತಿಗಳು ವೃದ್ಧಿಯಾಗಿ ಆ ಮೂಲಕ ಜೀವನದ ನಿಜವಾದ ಆನಂದಕ್ಕೆ ಪಾರವೇ ಇಲ್ಲದಂತಾಗುವುದು.