ಮುಂಬೈ: ಬಂಡವಾಳ ಮತ್ತು ಆದಾಯದ ಕೊರತೆ ಎದುರಿಸುತ್ತಿರುವ ಮುಂಬೈ ಮೂಲದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಲೈಸೆನ್ಸ್ ಅನ್ನು ಆರ್ಬಿಐ ರದ್ದು ಮಾಡಿದೆ.
ಆ ಬ್ಯಾಂಕ್ ಅನ್ನು ಮುಚ್ಚಲು ಮತ್ತು ಬರಖಾಸ್ತುದಾರರೊಬ್ಬರನ್ನು ನೇಮಿಸಲು ಆದೇಶ ಹೊರಡಿಸುವಂತೆ ಮಹಾರಾಷ್ಟ್ರದ ಸಹಕಾರಿ ಸಂಸ್ಥೆಗಳ ರಿಜಿಸ್ಟ್ರಾರ್ ಗೆ ಆರ್ಬಿಐ ಸೂಚನೆ ನೀಡಿದೆ.
ಆರ್ಬಿಐ ಆದೇಶ ನಿನ್ನೆ ಬುಧವಾರ (ಜೂನ್ 19) ಹೊರಬಂದಿದೆ. ಇವತ್ತಿನಿಂದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.
ಬೆಂಗಳೂರಿನಲ್ಲಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ವೊಂದು ಇದೆ. ಆದರೆ, ಬ್ಯಾಂಕಿಂಗ್ ಲೈಸೆನ್ಸ್ ರದ್ದು ಮಾಡಲಾಗಿರುವುದು ಮುಂಬೈನ ಸಿಟಿ ಕೋ ಆಪರೇಟಿವ್ ಬ್ಯಾಂಕ್. ಬೆಂಗಳೂರಿನಲ್ಲಿರುವುದು ಬೆಂಗಳೂರು ಸಿಟಿ ಕೋ ಆಪರೇಟವ್ ಬ್ಯಾಂಕ್. ಎರಡೂ ಬೇರೆ ಬ್ಯಾಂಕ್ಗಳು.
ಮುಂಬೈನ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಶಾಖೆಗಳು ಮುಂಬೈ ಮತ್ತು ಥಾಣೆ ನಗರಗಳಲ್ಲಿ ಇವೆ.
ಮುಂಬೈ ಮೂಲ ಸಿಟಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಬಹಳ ಗ್ರಾಹಕರ ಠೇವಣಿಗಳಿವೆ. ಆರ್ಬಿಐನಿದ ಮಾನ್ಯತೆ ಪಡೆದ ಯಾವುದೇ ಬ್ಯಾಂಕುಗಳಲ್ಲಿ ಠೇವಣಿದಾರರ ಐದು ಲಕ್ಷ ರೂವರೆಗಿನ ಹಣಕ್ಕೆ ಇನ್ಷೂರೆನ್ಸ್ ಗ್ಯಾರಂಟಿ ಇರುತ್ತದೆ. ವರದಿ ಪ್ರಕಾರ ಸಿಟಿ ಕೋ ಆಪರೇಟಿವ್ ಬ್ಯಾಂಕ್ನ ಶೇ. 87ರಷ್ಟು ಗ್ರಾಹಕರ ಹಣವನ್ನು ಸಂಪೂರ್ಣವಾಗಿ ಮರಳಿಸಬಹುದು.
ಠೇವಣಿ ಹಣದ ಇನ್ಷೂರೆನ್ಸ್ ಕೊಟ್ಟಿರುವ ಡೆಪಾಸಿಟ್ ಇನ್ಷೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಸಂಸ್ಥೆಯು ಗ್ರಾಹಕರಿಗೆ ಆ ಹಣವನ್ನು ಕೊಡಲಿದೆ. ವರದಿ ಪ್ರಕಾರ ಬ್ಯಾಂಕ್ ನ ಗ್ರಾಹಕರ ಮನವಿ ಮೇರೆಗೆ ವಿಮೆಗೆ ಅರ್ಹವಾಗಿರುವ 230.99 ಕೋಟಿ ರೂ ಹಣವನ್ನು ಡಿಐಜಿಸಿಸಿ ಈಗಾಗಲೇ ಕೊಟ್ಟಿರುವುದು ತಿಳಿದುಬಂದಿದೆ.