ಮನೆ ಅಪರಾಧ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ ಸಹೋದರನ ಹತ್ಯೆ

ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ ಸಹೋದರನ ಹತ್ಯೆ

0

ಮಸ್ಕಿ: ಸಹೋದರಿಗೆ ಲೈಂಗಿಕ ಕಿರುಕುಳ ಪ್ರಶ್ನಿಸಿದ ಸಹೋದರನ ಭೀಕರ ಕೊಲೆಗೈದ ಘಟನೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ‌ ನಡೆದಿದೆ.

Join Our Whatsapp Group

ಕೊಲೆಯಾದ ಯುವಕ ದೇವರಾಜ (22) ಎಂದು ಗುರುತಿಸಲಾಗಿದೆ.

ಲೈಂಗಿಕ‌ ಕಿರುಕುಳ ವಿಚಾರದ ಬಗ್ಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಮೃತ ದೇವರಾಜ ಎನ್ನುವ ಯುವಕನ ಸಹೋದರಿಗೆ ಅದೇ ಗ್ರಾಮದ ಬಸವರಾಜ ಎನ್ನುವ ಯುವಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಪರಸ್ಪರ ಎರಡು ಗುಂಪುಗಳ‌ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ದೇವರಾಜ ಎನ್ನುವವರಿಗೆ ಚಾಕು ಇರಿಯಲಾಗಿದೆ. ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಘಟನೆಯಲ್ಲಿ ಗಾಯಗೊಂಡ ಇನ್ನೂ ಮೂವರನ್ನು ಮಸ್ಕಿ ಆಸ್ಪತ್ರೆಗೆ ‌ದಾಖಲಿಸಲಾಗಿದೆ.

ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.