ಮನೆ ಅಪರಾಧ ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಕೊಲೆ: ಪತಿಯಿಂದಲೇ ಕೃತ್ಯ ಶಂಕೆ

ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಕೊಲೆ: ಪತಿಯಿಂದಲೇ ಕೃತ್ಯ ಶಂಕೆ

0

ನೆಲಮಂಗಲ(Nelamangala): ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯನ್ನು ಕೊಲೆಗೈದ ಘಟನೆ ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದು, ಪತಿಯೇ ಕೊಲೆ ಮಾಡಿರಬಹುದು ಎಂಬ ಆರೋಪ ಕೇಳಿಬಂದಿದೆ.

ಶೃತಿ (29) ಕೊಲೆಯಾದ ದುರ್ದೈವಿ.

ಮದುವೆಯಾದ ಮೂರು ತಿಂಗಳ‌ ನಂತರ ಪತ್ನಿಗೆ ಪತಿ ಕೃಷ್ಣಮೂರ್ತಿ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನಂತೆ. ತವರಿನಿಂದ ಹಣ ತೆಗೆದುಕೊಂಡು ಬಾರದ ಕಾರಣಕ್ಕೆ ದುಷ್ಕೃತ್ಯ ಎಸಗಿ ಪರಾರಿ ಯಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿಗಾಗಿ ಬಲೆ ಬೀಸಿದ್ದಾರೆ.