ಮನೆ ಅಪರಾಧ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಸಿಸ್ಟರ್​ಗೆ ಕೊಲೆ ಬೆದರಿಕೆ: ವಿಡಿಯೋ ಮೂಲಕ ರಕ್ಷಣೆಗಾಗಿ ಮನವಿ

ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಸಿಸ್ಟರ್​ಗೆ ಕೊಲೆ ಬೆದರಿಕೆ: ವಿಡಿಯೋ ಮೂಲಕ ರಕ್ಷಣೆಗಾಗಿ ಮನವಿ

0

ಮೈಸೂರು(Mysuru): ವಿಶೇಷ ಚೇತನ ಮಕ್ಕಳ ಕಾನ್ವೆಂಟ್​ನ ಅಕ್ರಮಗಳ ಕುರಿತು ಮಾತನಾಡಿದ್ದಕ್ಕೆ ಸಹದ್ಯೋಗಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ತಮಗೆ ರಕ್ಷಣೆ ನೀಡಬೇಕೆಂದು ಸುಧಾ ಕೆವಿ ಅಲಿಯಾಸ್ ಸಿಸ್ಟರ್ ವಿಲ್ಸೇನಾ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ನಗರದ ಶ್ರೀರಾಂಪುರ ಎರಡನೇ ಹಂತದಲ್ಲಿರುವ ಮರ್ಸಿ ಕಾನ್ವೆಂಟ್​ನಲ್ಲಿ ಕಳೆದ 25 ವರ್ಷಗಳಿಂದ ಸಿಸ್ಟರ್ ವಿಲ್ಸೇನಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಸಂಸ್ಥೆಯಲ್ಲಿನ ಉದ್ಯೋಗಿಗಳು 2 ಬಣವಾಗಿ ಒಡೆದಿದ್ದು, ನಾನು ಸಂಸ್ಥೆಯ ಅಕ್ರಮಗಳ ಬಗ್ಗೆ ಮಾತನಾಡಿದ್ದಕ್ಕೆ ಎದುರಾಳಿ ಬಣದ ಸಿಸ್ಟರ್ ದೀಪ, ಸಿಸ್ಟರ್ ಮಾರ್ಗರೇಟ್, ಸಿಸ್ಟರ್ ಆನ್ಮೇರಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ತನ್ನನ್ನು ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ವಿಡಿಯೋದಲ್ಲಿ ನನಗೆ ಯಾವುದೇ ತೊಂದರೆಗಳಿಲ್ಲ, ನಾನು ಆರೋಗ್ಯವಾಗಿಯೇ ಇದ್ದೇನೆ. ಮಾನಸಿಕವಾಗಿಯೂ ಕೂಡ ಸದೃಢಳಾಗಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಮಾನಸಿಕವಾಗಿ ಸರಿಯಿಲ್ಲ ಎಂದು ಆಸ್ಪತ್ರೆಗೂ ಸಹ ಸೇರಿಸಬಹುದು ಅಥವಾ ನಾನು ಕಾಣೆಯಾಗಿದ್ದೇನೆ, ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಹೇಳಬಹುದು. ಆದರೆ ಆತ್ಮಹತ್ಯೆಯಾಗಿರಲ್ಲ, ಕೊಲೆಯಾಗಿರುತ್ತದೆ. ದಯಮಾಡಿ ಎಲ್ಲರೂ ನನಗೆ ರಕ್ಷಣೆ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

ಈ ಕುರಿತು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಕೂಡ ಅವರು ಪತ್ರವನ್ನು ಬರೆದಿದ್ದಾರೆ.

ಬೆಂಗಳೂರಿನ ಮಾನವ ಹಕ್ಕು ಆಯೋಗಕ್ಕೆ ಮರ್ಸಿ ಕಾನ್ವೆಂಟ್​ನಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಪತ್ರ ಬರೆದ ನಂತರ, ಕಳೆದ ತಿಂಗಳ 31 ರ ಸಂಜೆ ಮೂರು ಜನ ಪುರುಷರು ಈಕೆಯ ಮೇಲೆ ಹಲ್ಲೆ ನಡೆಸಿ ಕೈ ಕಾಲು ಸ್ವಾಧೀನ ಕಳೆದುಕೊಳ್ಳುವ ಇಂಜೆಕ್ಷನ್ ನೀಡಿ, ಅಲ್ಲೇ ಇದ್ದ ಸೇಂಟ್ ಮೇರಿ ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಅಲ್ಲಿ ತಮ್ಮ ಸಂಬಂಧಿಕರು ಹಾಗೂ ತಂದೆಯ ಸಹಾಯದಿಂದ ಬಚಾವಾಗಿ ಬಂದು ಕಳೆದ ಎರಡು ದಿನಗಳ ಹಿಂದೆ ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ತನ್ನ ಮೇಲಾದ ಹಲ್ಲೆಯ ಬಗ್ಗೆ ದೂರು ನೀಡಿದ್ದಾರೆ.

ಪೊಲೀಸರು ದೂರು ಸ್ವೀಕರಿಸಿ ತನಿಖೆ ಕೈಗೊಂಡಿದ್ದಾರೆ.