ಮನೆ ಅಪರಾಧ ಮುರುಘಾ ಶ್ರೀ ಪ್ರಕರಣ: 3ನೇ ಆರೋಪಿ ಮರಿಸ್ವಾಮಿ ಬಂಧನ

ಮುರುಘಾ ಶ್ರೀ ಪ್ರಕರಣ: 3ನೇ ಆರೋಪಿ ಮರಿಸ್ವಾಮಿ ಬಂಧನ

0

ಚಿತ್ರದುರ್ಗ(Chitradurga): ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ಮತ್ತೊಂದು ಪೋಕ್ಸೋ ಕೇಸ್​​ ದಾಖಲಾದ ಬೆನ್ನಲ್ಲೇ ಪ್ರಕರಣದ 3ನೇ ಆರೋಪಿ ಮರಿಸ್ವಾಮಿ ಬಂಧನವಾಗಿದೆ.

ಮುರುಘಾ ಶ್ರೀಗಳ ಮೇಲೆ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವಿದ್ದು, ಎರಡನೇ ಎಫ್​ಐಆರ್​ನಲ್ಲೂ ಮರಿಸ್ವಾಮಿ ಹೆಸರು ಉಲ್ಲೇಖವಾಗಿತ್ತು.

ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಅಜ್ಞಾತ ಸ್ಥಳದಲ್ಲಿ ಮರಿಸ್ವಾಮಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.

ಚಿತ್ರದುರ್ಗ ಮಠದ ವಸತಿ ಶಾಲೆಯ ಅಡುಗೆ ಸಹಾಯಕಿಯೊಬ್ಬರು ತಮ್ಮಿಬ್ಬರು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಎಫ್’ಐಆರ್ ನಜರಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ದಾಖಲಾದ ಮತ್ತೊಂದು ಪೋಕ್ಸೋ ಪ್ರಕರಣ ಇದಾಗಿದೆ.

ಹಿಂದಿನ ಲೇಖನಏಕದಿನ ಕ್ರಿಕೆಟ್ ವಿಶ್ವಕಪ್‌: ತೆರಿಗೆ ವಿನಾಯಿತಿ ಸಿಗದಿದ್ದರೆ ಬಿಸಿಸಿಐಗೆ 955 ಕೋಟಿ ನಷ್ಟ
ಮುಂದಿನ ಲೇಖನರಾಷ್ಟ್ರ ಮಟ್ಟದ ಪಂಜಾ ಕುಸ್ತಿಗೆ ಮೈಸೂರಿನ ವಿಶೇಷ ಚೇತನ ಆಯ್ಕೆ