ಮನೆ ಅಪರಾಧ ಮುರುಘಾ ಶ್ರೀ ಪ್ರಕರಣ: ಐದನೇ ಆರೋಪಿ ಪೊಲೀಸರಿಗೆ ಶರಣು

ಮುರುಘಾ ಶ್ರೀ ಪ್ರಕರಣ: ಐದನೇ ಆರೋಪಿ ಪೊಲೀಸರಿಗೆ ಶರಣು

0

ಚಿತ್ರದುರ್ಗ(Chitradurga):  ವಿದ್ಯಾರ್ಥಿಗಳ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣದ 5ನೇ ಆರೋಪಿ ವಕೀಲ ಗಂಗಾಧರಯ್ಯ ಪೊಲೀಸರ ಬಳಿ ಶರಣಾಗಿದ್ದಾರೆ.

ಪ್ರಕರಣದ 5ನೇ (A5) ಆರೋಪಿಯಾಗಿರುವ ವಕೀಲ ಗಂಗಾಧರಯ್ಯ ಮಂಗಳವಾರ  ಪೊಲೀಸರಿಗೆ ಶರಣಾಗಿದ್ದು,  ಚಿತ್ರದುರ್ಗದ ಡಿವೈಎಸ್​ಪಿ ಕಚೇರಿಯಲ್ಲಿ ಗಂಗಾಧರಯ್ಯ ವಿಚಾರಣೆ ನಡೆಯುತ್ತಿದೆ.

ಪ್ರಕರಣದ 3ನೇ ಆರೋಪಿಯಾಗಿರುವ ಮಠದ ಉತ್ತರಾಧಿಕಾರಿ ಮತ್ತು 4ನೇ ಆರೋಪಿ ಪರಮಶಿವಯ್ಯ ಈವರೆಗೆ ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಅವರ ಬಂಧನಕ್ಕಾಗಿ ಹುಡುಕಾಟ ಮುಂದುವರಿದಿದೆ. ಇನ್ನು  ಪ್ರಕರಣದ ಮುಖ್ಯ ಆರೋಪಿ ಮುರುಘಾ ಶ್ರೀಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.