ಮನೆ ಅಂತಾರಾಷ್ಟ್ರೀಯ ಅಧಿಕೃತವಾಗಿ ಟ್ವಿಟರ್​​​​​​​​​ ಆಡಳಿತ ಕೈಗೆ ತೆಗೆದುಕೊಂಡ ಮಸ್ಕ್​: ಉನ್ನತ ಹುದ್ದೆಯಲ್ಲಿದ್ದ ಭಾರತ ಮೂಲದವರು ವಜಾ

ಅಧಿಕೃತವಾಗಿ ಟ್ವಿಟರ್​​​​​​​​​ ಆಡಳಿತ ಕೈಗೆ ತೆಗೆದುಕೊಂಡ ಮಸ್ಕ್​: ಉನ್ನತ ಹುದ್ದೆಯಲ್ಲಿದ್ದ ಭಾರತ ಮೂಲದವರು ವಜಾ

0

ನ್ಯೂಯಾರ್ಕ್‌(Newyark): ಸಾಮಾಜಿಕ ಮಾಧ್ಯಮ ಟ್ವಿಟರ್‌ಅನ್ನು 44 ಶತಕೋಟಿ ಡಾಲರ್‌ಗೆ (₹3.62 ಲಕ್ಷ ಕೋಟಿ)ಗೆ ಖರೀದಿಸುವ ಪ್ರಕ್ರಿಯೆಯನ್ನು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಗುರುವಾರ ತಡರಾತ್ರಿ ಪೂರ್ಣಗೊಳಿಸಿದ್ದಾರೆ.

ಟ್ವಿಟರ್‌ನಲ್ಲಿರುವ ನಕಲಿ ಖಾತೆಗಳ ಕುರಿತು ದಿಕ್ಕು ತಪ್ಪಿಸಿದ್ದರು ಎಂಬ ಆರೋಪದ ಮೇಲೆ ಕಂಪನಿಯ ಉನ್ನತ ಮಟ್ಟದ ಹುದ್ದೆಯಲ್ಲಿದ್ದ ಹಲವರನ್ನುಮಸ್ಕ್ ವಜಾಗೊಳಿಸಿದ್ದಾರೆ.

ಟ್ವಿಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, ಭಾರತ ಮೂಲದ ಪರಾಗ್ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನು ವಜಾಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಖರೀದಿ ಒಪ್ಪಂದವನ್ನು ಪೂರ್ಣಗೊಳಿಸುವ ವೇಳೆ ಅಗರವಾಲ್ ಮತ್ತು ಸೆಗಲ್ ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋದ ಪ್ರಧಾನ ಕಚೇರಿಯಲ್ಲಿದ್ದರು ಎಂದು ಹೇಳಲಾಗಿದೆ.

ಟ್ವಿಟರ್ ಸಂಸ್ಥೆಯಿಂದಾಗಲಿ, ಮಸ್ಕ್ ಅವರಿಂದಾಗಲಿ, ಕಾರ್ಯನಿರ್ವಾಹಕ ಅಧಿಕಾರಿಗಳಾಗಲಿ ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.