ಮನೆ ರಾಜ್ಯ ನನ್ನ ಜೀವನ ತೆರೆದ ಪುಸ್ತಕ. ಯಾರೂ ಏನು ಮಾಡಲು ಆಗುವುದಿಲ್ಲ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ನನ್ನ ಜೀವನ ತೆರೆದ ಪುಸ್ತಕ. ಯಾರೂ ಏನು ಮಾಡಲು ಆಗುವುದಿಲ್ಲ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

0

ರಾಮನಗರ: ನನ್ನ ಜೀವನ ತೆರೆದ ಪುಸ್ತಕ. ಯಾರೂ ಏನು ಮಾಡಲು ಆಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರ ಕುರಿತು  ಪ್ರತಿಕ್ರಿಯಿಸಿರುವ ಹೆಚ್.ಡಿ ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಹೀರಾತು ನೀಡಿ ಓಡಾಡುತ್ತಿದ್ದಾರೆ.  ಶಕ್ತಿ ಯೋಜನೆ ಜಾರಿ ಮಾಡಿದ್ದಾರೆ. ಆದರೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.  ಸರ್ಕಾರ ಒಂದು ಕಡೆ ಪ್ರಚಾರ  ಮಾಡುತ್ತಿದ್ದಾರೆ. ಮತ್ತೊಂದು ಕಡೆ ನನ್ನ ಪೋಟೊಗಳನ್ನ ಹಾಕಿದ್ದಾರೆ.  ನನ್ನ ಜೀವನ ತೆರೆದ ಪುಸ್ತಕ ಯಾರು ಏನು ಮಾಡಲು ಆಗುವುದಿಲ್ಲ ಎಂದರು.

ಬರದ ವಿಚಾರವಾಗಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ರೈತರಿಗೆ ಯಾವುದೇ ಪರಿಹಾರ ಹಣವನ್ನು ಇನ್ನೂ  ನೀಡಿಲ್ಲ. ರಾಜ್ಯದಲ್ಲಿ ಈ ವರ್ಷದಲ್ಲಿ 33,700 ಕೋಟಿ ರೂ. ಬೆಳೆ ನಷ್ಟವಾಗಿದೆ  ಎಂದು ಆರೋಪಿಸಿದ್ದಾರೆ.

ಹಿಂದಿನ ಲೇಖನಯುಎಪಿಎ ಆರೋಪಿ ಸಮಾಜಕ್ಕೆ ಅಪಾಯಕಾರಿ ಎಂದು ವಿವರಿಸಲು ಪೊಲೀಸರು ವಿಫಲವಾದರೆ ಜಾಮೀನು ನೀಡಬಹುದು: ಕಾಶ್ಮೀರ ಹೈಕೋರ್ಟ್
ಮುಂದಿನ ಲೇಖನಮೃತಪಟ್ಟಿರುವುದಾಗಿ ಬಿಂಬಿಸಿಕೊಂಡು 2 ವರ್ಷ ತಲೆಮರೆಸಿಕೊಂಡಿದ್ದ ರೌಡಿಯ ಬಂಧನ