ಮನೆ ರಾಜಕೀಯ ವಿಕಲಚೇತನರ ಏಳಿಗೆಗೆ ಶ್ರಮಿಸುವುದೇ ನನ್ನ ಧ್ಯೇಯ: ಸಚಿವ ಕೆ.ಗೋಪಾಲಯ್ಯ

ವಿಕಲಚೇತನರ ಏಳಿಗೆಗೆ ಶ್ರಮಿಸುವುದೇ ನನ್ನ ಧ್ಯೇಯ: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು: ವಿಕಲಚೇತನರು ಯಾವುದೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ಅಥವಾ ಕಚೇರಿ ಭೇಟಿಗೆ ಮಾಡಿ ನಿಮ್ಮ ಅಹವಾಲನ್ನು ನೀಡಿ ವಿಕಲಚೇತನರ ಏಳಿಗೆಗೆ ಶ್ರಮಿಸುವುದೇ ನನ್ನ ಧ್ಯೇಯ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರು ತಿಳಿಸಿದರು.

Join Our Whatsapp Group

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡಿನ ವಿಕಲಚೇತನರೊಡನೆ ಸಮಾಲೋಚನೆಯನ್ನು ನಡೆಸಿ ಅವರು ಮಾತನಾಡಿದರು.

ಮೋಟರ್ ಸೈಕಲ್ ನ ಅಗತ್ಯವಿರುವವರು ಅರ್ಜಿಯನ್ನು ಸಲ್ಲಿಸಿ ಚುನಾವಣೆಯ ನಂತರದಲ್ಲಿ ಅವರಿಗೆ ವಿತರಿಸಲಾಗುವುದು ಎಂದರು.

ಕ್ಷೇತ್ರದಲ್ಲಿನ 350 ವಿಕಲಚೇತನರಿಗೆ ಮೋಟಾರ್ ಬೈಕ್ ಅನ್ನು ವಿತರಿಸಲಾಗಿದೆ. ಇದರ ಜೊತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಸಹಾಯಧನ ಹಾಗೂ ಇನ್ನಿತರ ಸವಲತ್ತುಗಳನ್ನು ನೀಡಲಾಗುವುದು ಎಂದು ಹೇಳಿದರು.

ವಿಶ್ವ ಅಂಗವಿಕಲರ ದಿನಾಚರಣೆಯಂದು ಕ್ಷೇತ್ರದಲ್ಲಿ ಮೆರವಣಿಗೆ ಮೂಲಕ ಭಾರತೀಯ ಜನತಾ ಪಾರ್ಟಿಯ ಧ್ವಜವನ್ನು ಮೋಟಾರ್ ಬೈಕ್ ನಲ್ಲಿ ಹಾಕಿ ಬೆಂಬಲಿಸುವುದಾಗಿ ತಿಳಿದ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಳಿನ್ ಕುಮಾರ್ ಕಟೀಲ್ ಶ್ಲಾಘನೆ

ಕ್ಷೇತ್ರಕ್ಕೆ ಅಭಿವೃದ್ಧಿ ಜನರ ನಡುವಿನ ಒಡನಾಟ ಸಂಬಂಧ ಗೋಪಾಲಯ್ಯನವರಿಗೆ ಹೆಚ್ಚು ಇದೆ. ಈ ಬಾರಿ ನಿಮ್ಮ ಮತ ಗೋಪಾಲಯ್ಯ ಮತ್ತು ಕಮಲಕ್ಕೆ ಗುರುತಿಗೆ ನೀಡಿ ಎಂದು ಹೇಳಿದ್ದಾರೆ .

ರಾಜ್ಯದಲ್ಲಿ 224 ಕ್ಷೇತ್ರದಲ್ಲಿ ಪ್ರವಾಸವನ್ನು ಮಾಡಿದ್ದೇನೆ ಈ ಬಾರಿ ಬಹುಮತ ಸಹಕಾರ ನಮ್ಮ ಭಾರತೀಯ ಜನತಾ ಪಾರ್ಟಿ ಸರ್ಕಾರ ಮತ್ತೊಮ್ಮೆ ಯಡಿಯೂರಪ್ಪ ರವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ರವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರ ರಚನೆಯಾಗುತ್ತದೆ ಎಂದರು.

ಬಹಳ ಗಂಭೀರವಾಗಿ ವಿಕಲಚೇತನರ ಬಗ್ಗೆ ಚಿಂತನೆಯನ್ನು ಮಾಡಿ ವಿಕಲಚೇತನರನ್ನು ಜೊತೆಯಾಗಿರಿಸಿಕೊಂಡ ಶಾಸಕರು ಅಂದರೆ ಅವರು ಗೋಪಾಲಯ್ಯ. ಅದಕ್ಕೆ ಸಾಕ್ಷಿ ಜನಸಾಮಾನ್ಯರು ಎಂದರು.

ವಿಕಲ ಚೇತನರಿಗೆ ಹೆಚ್ಚು ಆದ್ಯತೆಯನ್ನು ನೀಡಿದ್ದಾರೆ. ದೇಶದಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಕಲ ಚೇತನರಿಗೆ ವಿಶೇಷವಾಗಿ ಆದ್ಯತೆಯನ್ನು ನೀಡಬೇಕು. .

ಪ್ರಧಾನಿ ನರೇಂದ್ರ ಮೋದಿಯವರು ವಿಕಲಚೇತನರಿಗೆ ಪ್ರತ್ಯೇಕವಾಗಿ ಹೆಚ್ಚಿನ ಆಧ್ಯತೆ ಯೊಂದಿಗೆ ಉತ್ತಮ ಸೌಲಭ್ಯವನ್ನು ನೀಡಿದ್ದಾರೆ ಎಂದರು.

ಮಾಜಿ ಶಾಸಕರಾದ ನೆಲ ನರೇಂದ್ರಬಾಬು, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಾಜಿ ಬಿಬಿಎಂಪಿ ಸದಸ್ಯ ರಾಜೇಂದ್ರ ಕುಮಾರ್, ಜಯರಾಮ್, ಅರುಣ್, ಗುಣ ಶೇಖರ್, ಜಯಮ್ಮ, ಮಹೇಶ್, ಪ್ರಸನ್ನ, ಲೋಕೇಶ್ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.