ಮನೆ ಕಾನೂನು ನನ್ನ ಪತ್ನಿ ಹೆಣ್ಣಲ್ಲ: ವಿಚ್ಛೇದನಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋದ ಪತಿ

ನನ್ನ ಪತ್ನಿ ಹೆಣ್ಣಲ್ಲ: ವಿಚ್ಛೇದನಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋದ ಪತಿ

0

ನವದೆಹಲಿ: ನನ್ನ ಪತ್ನಿ ಹೆಣ್ಣಲ್ಲ, ಗಂಡು ಎಂದು ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ವಿಚ್ಚೇದನ ಕೊಡಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ವಿಚಾರಣೆಗೆ ಸಮ್ಮತಿ ನೀಡಿರುವ ನ್ಯಾಯಪೀಠ, ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ದೂರು ನೀಡಿರುವ ಪತಿಯ ಪತ್ನಿಗೆ ಸೂಚಿಸಿದೆ.

ನನ್ನ ಪತ್ನಿ ಹೆಣ್ಣಲ್ಲ, ಪುರುಷ ಜನನಾಂಗ ಮತ್ತು ಅಪೂರ್ಣ ಕನ್ಯತ್ವ (ಯೋನಿ) ಹೊಂದಿದ್ದಾರೆ. ಇದನ್ನು ವೈದ್ಯಕೀಯ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದು ಕ್ರಿಮಿನಲ್‌ ಅಪರಾಧವಾಗಿದೆ. ನನ್ನ ಪತ್ನಿಗೆ ಹುಟ್ಟುವಾಗಲೇ ಎರಡು ಲಿಂಗಗಳು ಇವೆ. ಇವರು ಉದ್ದೇಶಪೂರ್ವಕವಾಗಿ ನನಗೆ ಮೋಸ ಮಾಡಿದ್ದಾರೆ. ಕೂಡಲೇ ನ್ಯಾಯಾಲಯ ವಿಚ್ಛೇದನ ಕೊಡಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.ದೂರು ನೀಡಿರುವ ವ್ಯಕ್ತಿಯ ಪತ್ನಿಗೆ ಉತ್ತರಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದೆ