ಮೈಸೂರು: ನಿವೇಶನವೊಂದಕ್ಕೆ ಸಂಬಂಧಪಟ್ಟಂತೆ 20ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಎನ್.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಎನ್.ಆರ್.ಮೊಹಲ್ಲಾ ಶಿವಾಜಿ ರಸ್ತೆಯ ನಿವಾಸಿ ತಸ್ಲೀಮ್ ಅಹಮ್ಮದ್ ಶರೀಫ್, ನದೀಮ್ ಅಹಮ್ಮದ್ ಶರೀಫ್, ಡಾ. ರಫಿ ಅಹಮ್ಮದ್ ಶರೀಫ್ ಎಂಬುವರೇ ಆರೋಪಿಗಳು.
ಇವರ ಕುರಿತು ತ್ರಿವೇಣಿ ನಗರದ ಮಹಮ್ಮದ್ ಹುಸೇನ್ ಎಂಬುವವರು ದೂರು ದಾಖಲಿಸಿದ್ದಾರೆ.
ಸಿಐಟಿಬಿ ವತಿಯಿಂದ ಬನ್ನಿಮಂಟಪದ ಇಂಡಸ್ಟ್ರಿಯಲ್ ಎ ಲೇಔಟ್ ನಲ್ಲಿ 490/340 ಅಡಿ ವಿಸ್ತೀರ್ಣದ ನಿವೇಶನ ಮಂಜೂರಾಗಿದ್ದು, ಈ ನಿವೇಶನವನ್ನು ನನ್ನ ಹೆಸರಿಗೆ ಕ್ರಯಪತ್ರ ಬರೆದುಕೊಡುವುದಾಗಿ 20 ಲಕ್ಷ ರೂ. ಹಣವನ್ನು ಪಡೆದು, ಮೂವರು ಸೇರಿ ಮೋಸ ಮಾಡುವ ಉದ್ದೇಶದಿಂದ 2 ನೋಂದಣಿ ಇಲ್ಲದ ಕ್ರಯದ ಕರಾರು ಪತ್ರಗಳನ್ನು ಸೃಷ್ಟಿಸಿ, ಬರೆದುಕೊಟ್ಟು 20 ಲಕ್ಷ ರೂ. ಪಡೆದು ನನ್ನ ಹೆಸರಿಗೆ ಕ್ರಯ ಪತ್ರವನ್ನು ಬರೆಯದೇ ಮೋಸ ಮಾಡಿದ್ದಾರೆ.
ಕ್ರಯ ಪತ್ರದ ರದ್ದತಿ ಪತ್ರವನ್ನು ಸೃಷ್ಟಿಸಿಕೊಂಡು ಆ ಮುಲಕ ನನಗೆ ಮೋಸ ಮಾಡಿದ್ದು, ಇದರಿಂದ ನನಗೆ ಆರ್ಥಿಕ ನಷ್ಟವಾಗಿದೆ. ಹಾಗಾಗಿ ಮೂವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.
ಈ ಸಂಬಂದ ಎನ್. ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














