ಮನೆ ಕೃಷಿ ಮೈಸೂರು: ಕೃಷಿ ಕ್ಷೇತ್ರದಲ್ಲಿ ಬಳಸುವ ಡ್ರೋನ್‌ಗಳ ಪ್ರಾತ್ಯಕ್ಷಿಕೆ

ಮೈಸೂರು: ಕೃಷಿ ಕ್ಷೇತ್ರದಲ್ಲಿ ಬಳಸುವ ಡ್ರೋನ್‌ಗಳ ಪ್ರಾತ್ಯಕ್ಷಿಕೆ

0
ಸಾಂದರ್ಭಿಕ ಚಿತ್ರ

ಮೈಸೂರು(Mysuru): ಬೆಳೆಗಳಿಗೆ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಿಸುವಂತಹ ಡ್ರೋನ್‌ ಪ್ರಾತ್ಯಕ್ಷಿಕೆಯನ್ನು ಶುಕ್ರವಾರ ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿ ನಡೆಸಲಾಯಿತು.

ಪ್ರಾತ್ಯಕ್ಷಿಕೆಯನ್ನು ಕೇಂದ್ರ ಸಚಿವರಾದ ಡಾ.ಜಿತೇಂದ್ರ ಸಿಂಗ್ ಹಾಗೂ ಶೋಭಾ ಕರಾಂದ್ಲಾಜೆ ಅವರು ವೀಕ್ಷಿಸಿದರು.

ಈ ಡ್ರೋನ್‌ಗಳಿಂದ 10 ನಿಮಿಷದ ಅವಧಿಯಲ್ಲಿ ಬೆಳೆಗಳಿಗೆ ಗೊಬ್ಬರ ಹಾಗೂ ಕೀಟನಾಶಕಗಳನ್ನು ಸಿಂಪಡಿಸಬಹುದು ಎಂದು ಚೆನ್ನೈನ ಗರುಡ ಏರೋಸ್ಪೇಸ್ ಕಂಪನಿಯ ರೈಸ್ ತಿಳಿಸಿದರು.

ಇದಕ್ಕೂ ಮುನ್ನ ಇಬ್ಬರು ಸಚಿವರು ಇಲ್ಲಿ ಲಘು ಉದ್ಯೋಗ ಭಾರತಿ– ಕರ್ನಾಟಕ, ಐಎಂಎಸ್‌ ಫೌಂಡೇಶನ್‌ ವತಿಯಿಂದ ಸಿಎಸ್‌ಐಆರ್‌– ಸಿಎಫ್‌ಟಿಆರ್‌ಐ ಸಹಯೋಗದಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ‘ಟೆಕ್‌ ಭಾರತ್–2022’ ತಂತ್ರಜ್ಞಾನ ವಸ್ತುಪ್ರದರ್ಶನ ಮತ್ತು ಸಮಾವೇಶದಲ್ಲಿ ಭಾಗಿಯಾದರು‌.

ಹಿಂದಿನ ಲೇಖನಚಿಕ್ಕಬಳ್ಳಾಪುರ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರು ಭರವಸೆ: ಆರೋಗ್ಯ ಸಚಿವ ಸುಧಾಕರ್‌ ಮನವಿಗೆ ಸಕಾರಾತ್ಮಕ ಸ್ಪಂದನೆ
ಮುಂದಿನ ಲೇಖನಅಭಿವೃದ್ಧಿ ಶೂನ್ಯ ವ್ಯಕ್ತಿಗಳಿಂದ ಸಿದ್ದರಾಮಯ್ಯರನ್ನು ಟೀಕಿಸುವ ನೈತಿಕ ಹಕ್ಕಿಲ್ಲ: ಎಚ್.ಎ.ವೆಂಕಟೇಶ್