ಮೈಸೂರು: ನಂಜನಗೂಡಿನ ಕವಲಂದೆ ಬಳಿ ಮಂಗಳವಾರ ಮುಂಜಾನೆ ರೈಲಿಗೆ ಸಿಲುಕಿ ಬಿಹಾರ ಮೂಲದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ರೈಲ್ವೆ ಪೊಲೀಸರ ಪ್ರಕಾರ, ಮೃತರನ್ನು ಬಿಹಾರ ಮೂಲದ ಮನು ಕುಮಾರ್ (27) ಎಂದು ಗುರುತಿಸಲಾಗಿದ್ದು, ಬೆಳಗ್ಗೆ 8 ಗಂಟೆ ಸುಮಾರಿಗೆ ಚಾಮರಾಜನಗರದಿಂದ ಬರುತ್ತಿದ್ದ ರೈಲಿಗೆ ಸಿಲುಕಿ ಕಾರ್ಮಿಕ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.
ದುರಂತ ಸಂಭವಿಸಿದಾಗ ಮನು ವೀಡಿಯೊ ಕಾಲ್ ನಲ್ಲಿದ್ದ. ತನ್ನ ಹೆಂಡತಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತ ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಗು ನಂಜನಗೂಡಿನಲ್ಲಿ ಬಡಗಿಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಮೃತದೇಹವನ್ನು ಎಂಎಂಸಿಆರ್ ಐ ಶವಾಗಾರಕ್ಕೆ ರವಾನಿಸಲಾಗಿದೆ.