ಮನೆ ಸುದ್ದಿ ಜಾಲ ಮೈಸೂರು: ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವು

ಮೈಸೂರು: ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವು

0

ಮೈಸೂರು: ಕಬಿನಿ ಹಿನ್ನಿರಿನ ಮೀಸಲು ಅರಣ್ಯ ಪ್ರದೇಶದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬ ಅರಣ್ಯ ಸಿಬ್ಬಂದಿಗೆ ಹೆದರಿ ಓಡಿಹೋಗುವಾಗ ಕೇಸರಿನಲ್ಲಿ ಸಿಲುಕಿ ಹೊರಬರಲಾರದೇ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳೆ ಹಾಡಿಯ ಹಳೆಯ ಮಾಸ್ತಿ ಗುಡಿ ಬಳಿ ನಡೆದಿದೆ.

Join Our Whatsapp Group

ಮಂಗಳವಾರ ಸಂಜೆ ಕಬಿನಿ ಹಿನ್ನೀರಿನ ಹಳೇ ಮಾಸ್ತಿಗುಡಿ ಬಳಿ ಮೀನು ಹಿಡಿಯಲು ಐದು ಮಂದಿ ಆದಿವಾಸಿ ಜನರು ಹೋಗಿದ್ದರು. ಈ ಪ್ರದೇಶ ನಾಗರ ಹೊಳೆ ಅರಣ್ಯದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಈ ಪ್ರದೇಶದಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ.

ಮೊನ್ನೆ ಸಂಜೆ ಐವರು ಮೀನು ಹಿಡಿಯಲು ತೆರಳಿದ್ದರು. ಅದೇ ಮಾರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದು, ಈ ಪ್ರದೇಶದಲ್ಲಿ ಮೀನು ಹಿಡಿಯುವುದು ನಿಷೇಧವಿದೆ ಎಂದು ಇವರಿಗೆ ಬೆದರಿಸಿದ್ದಾರೆ. ‌ಆಗ ಮೀನು ಹಿಡಿಯಲು ಬಂದ್ದಿದ್ದ ಅವರು ಅರಣ್ಯ ಸಿಬ್ಬಂದಿಯನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಭರದಲ್ಲಿ ಬಳ್ಳೆ ಹಾಡಿಯ ಆದಿವಾಸಿ‌ ಮಾಸ್ತಿ (30) ಹಿನ್ನೀರಿನ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. ಉಳಿದವರು ಕೆಸರಿನಿಂದ ಹೊರಬರುವಲ್ಲಿ ಸಫಲರಾಗಿದ್ದು, ಕೆಸರಿನಿಂದ ಹೊರಬರಲಾಗದೆ ಮಾಸ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಹಾಗೂ ಆದಿವಾಸಿಗಳು ಆಗಮಿಸಿದ್ದರು. ಆದಿವಾಸಿ ಮಾಸ್ತಿ ಸಾವಿಗೆ ಅರಣ್ಯ ಸಿಬ್ಬಂದಿ ಕಾರಣ ಎಂದು ಸಂಬಂಧಿಕರು ಆರೋಪಿಸಿದರು. ಬಳಿಕ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಸ್ಥಳಕ್ಕೆ ಎಚ್ ಡಿ ಕೋಟೆ ತಾಲೂಕಿನ ಅಂತರಸಂತೆ ಪೊಲೀಸರು ಆಗಮಿಸಿ ಆದಿವಾಸಿಗಳನ್ನು ಸಮಾಧಾನಗೊಳಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.