ಮೈಸೂರು(Mysuru): ಬ್ಲೇಡ್ನಿಂದ ಹಲ್ಲೆ ಮಾಡಿ ಯುವಕನ ಕೊಲೆ ಮಾಡಿರುವ ಘಟನೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದೆ.
ನಗರದ ಕುಂಬಾರಕೊಪ್ಪಲು ನಿವಾಸಿ ಸುನೀಲ್ ಕುಮಾರ್ (31) ಕೊಲೆಯಾದ ಯುವಕ
ಮಾರುಕಟ್ಟೆಯ ಬಾಳೆ ಮಂಡಿ ಭಾಗದಲ್ಲಿ ಬುಧವಾರ ರಾತ್ರಿ 11.30ರ ವೇಳೆ ಘಟನೆ ನಡೆದಿದ್ದು, ಯುವಕ ತೀವ್ರ ರಕ್ತಸ್ರಾವದಿಂದ ನರಳಿ ಪ್ರಾಣ ಬಿಟ್ಟಿದ್ದಾನೆ.
ಇಬ್ಬರು ಯುವಕರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.














