ಮನೆ ಉದ್ಯೋಗ ಮೈಸೂರು:  ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ

ಮೈಸೂರು:  ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ

0


ಮೈಸೂರು:  2022-23ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನ ಆಜಾದ್ ಮಾದರಿ ಶಾಲೆ, ಲಷ್ಕರ್ ಮೊಹಲ್ಲಾ, ಕೆಸರೆ ಹಾಗೂ ಹುಣಸೂರು ಶಾಲೆಗಳಿಗೆ ಹಿಂದಿ ಮತ್ತು ದೈಹಿಕ ಶಿಕ್ಷಣ ಬೋಧನೆಗಾಗಿ ಅತಿಥಿ ಶಿಕ್ಷಕರು ಬೇಕಾಗಿರುವ ಕಾರಣ ಜಿಲ್ಲಾ ಕಛೇರಿ ಮೈಸೂರು ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು 2022ರ ನವೆಂಬರ್ 27 ಕೊನೆಯ ದಿನಾಂಕವಾಗಿರುತ್ತದೆ.
 ಆಸಕ್ತ B.Ed    (ಹಿಂದಿ) ಮತ್ತು B.PEd  ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
 ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನ ಆಜಾದ್ ಭವನ, ಸಿ.ಎ:ನಂ-1 ಶೋಭ ಗಾರ್ಡನ್ ಪಕ್ಕ, ದಂಡಿನಮಾರಮ್ಮ ದೇವಸ್ಥಾನದ ಎದುರು, ಬೆಂಗಳೂರು-ಮೈಸೂರು ರಸ್ತೆ, ಮೈಸೂರು ಜಿಲ್ಲೆ- 570007 ಇಲ್ಲಿ ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ: 0821-2422088 ಅನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಈ ರಾಶಿಯವರು ಯಾರಿಗೂ ಸಾಲ ಕೊಡಬೇಡಿ..!
ಮುಂದಿನ ಲೇಖನದೇಶದ ಮೊದಲ ಖಾಸಗಿ ರಾಕೆಟ್ ಇಂದು ಉಡಾವಣೆ