ಮನೆ ರಾಜ್ಯ ಯೋಗ ಹಬ್ ಆಗಿ ಮೈಸೂರು: ಶಾಸಕ ರಾಮದಾಸ್​

ಯೋಗ ಹಬ್ ಆಗಿ ಮೈಸೂರು: ಶಾಸಕ ರಾಮದಾಸ್​

0

ಮೈಸೂರು(Mysuru): ಮೋದಿ ಆಗಮನದಿಂದಾಗಿ ಮೈಸೂರು ವಿಶ್ವದ ಗಮನ ಸೆಳೆದಿದೆ. ಇನ್ನು ಮುಂದಿನ ಒಂದು ವರ್ಷ ಮೈಸೂರು ಯೋಗ ಹಬ್ ಆಗಲಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತು ಯೋಗ ಬೆಳವಣಿಗೆ ಬಗ್ಗೆ ಆಸಕ್ತಿ ವಹಿಸಿದ್ದು, ಅದರನ್ವಯ ಮುಂದಿನ ಒಂದು ವರ್ಷ ಯೋಗ ದಿನವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಯೋಜನೆಯ ಕಾರ್ಯ ರೂಪಕ್ಕೆ ಶ್ರಮಿಸಲಾಗುವುದು ಎಂದರು.

ಮುಂದಿನ ಒಂದು ವರ್ಷದಲ್ಲಿ ಮನೆ ಮನೆಗೆ ಯೋಗ ತಲುಪಿಸುವ ಕಾರ್ಯ ನಡೆಯಲಿದೆ. ಯೋಗ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ 50 ಜನರಿಗೆ ಮೇಲ್ಪಟ್ಟು ನೀಡುವ ಯೋಗ ತರಬೇತುದಾರರಿಗೆ ಸರ್ಕಾರದ ವತಿಯಿಂದ ಮಾಸಿಕ 6000 ರೂ. ನೀಡುವುದರ ಬಗ್ಗೆ ಮತ್ತು ಪ್ರತಿಯೊಂದು ಶಾಲೆಯಲ್ಲಿ ಯೋಗ ಶಿಕ್ಷಕರ ನೇಮಕದ ಬಗ್ಗೆ ಚಿಂತನೆ ನಡೆಸಿರುವುದಾಗಿ ಅವರು ತಿಳಿಸಿದರು.

60 ವಾರ್ಡ್​ಗಳಲ್ಲಿ 1 ವಾರ್ಡ್ ಟೋಟಲ್ ಹೆಲ್ತ್ ಪ್ರೋಗ್ರಾಂ ಅಡಿಯಲ್ಲಿ ಆಯ್ಕೆ ಮಾಡಿ, ಸಂಪೂರ್ಣ ಆರೋಗ್ಯ ವ್ಯವಸ್ಥೆ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಮೈಸೂರಿನಲ್ಲಿ ಯೋಗ ಆಚರಣೆಗೆ ತಪಸ್ಸು ಮಾಡಿದ ಗಣ್ಯರ ನೆನಪಿಗಾಗಿ 2 ಕೋಟಿ ರೂ. ವೆಚ್ಚದಲ್ಲಿ 3 ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.

ಮೈಸೂರಿನ ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅರಮನೆ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯ ಯಶಸ್ಸಿಗೆ ದುಡಿದ ಯೋಗ ತರಬೇತುದಾರರು, ಯೋಗ ಪಟುಗಳು, ಸರ್ವರಿಗೂ ಅಭಿನಂದನೆ ಅರ್ಪಿಸಿದರು.