ಮನೆ ಸ್ಥಳೀಯ ಮೈಸೂರು ಬ್ರಾಂಡ್ ಲೋಗೋ ಬಿಡುಗಡೆ

ಮೈಸೂರು ಬ್ರಾಂಡ್ ಲೋಗೋ ಬಿಡುಗಡೆ

0

ಮೈಸೂರು:  ಮೈಸೂರು ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರವಾಸೋಧ್ಯಮ ಇಲಾಖೆಯ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ನೂತನವಾದ ಬ್ರಾಂಡ್ ಮೈಸೂರು ಲೋಗೋವನ್ನು ಭಾನುವಾರ ಜಿಲ್ಲಾಪಂಚಾಯಿತಿಯ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಮೈಸೂರು ಬ್ರಾಂಡಿಂಗ್ ಗಾಗಿ ಇದು ದೊಡ್ಡ ಹೆಜ್ಜೆ. ಇದರಿಂದ ಹಲವಾರು ಅನುಕೂಲತೆಗಳು ಆಗಲಿದೆ. ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯಗಳನ್ನು ಆರ್ಕಸಿಸುವುದಕ್ಕಾಗಿ ಮಾಡುತ್ತಿಲ್ಲ. ವಿಶ್ವದ ಪ್ರವಾಸಿ ಪ್ರೇಮಿಗಳನ್ನು ಸೆಳೆಯಲು ಮುಖ್ಯ ಉದ್ದೇಶವಾಗಿದೆ. ಇತಿಹಾಸ ತಿಳಿಯಲು ಅನುಕೂಲವಾಗುತ್ತದೆ.

ಮೈಸೂರನ್ನು ಕೇವಲ ಅರಮನೆಗಳ ನಗರಿ ಎಂದೇ ನೋಡುತ್ತೇವೆ. ಆದರೆ ಇಲ್ಲಿ ಪ್ರವಾಸಿ ಕ್ಷೇತ್ರಗಳನ್ನು ಇಲ್ಲಿ ನೋಡಬಹುದು. ಜಗತ್ತಿನಲ್ಲಿ ಹಲವಾರು ಪ್ರವಾಸಿ ಕ್ಷೇತ್ರಗಳು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುತ್ತದೆ. ಹಳೆಬೇಡು  ಬೇಲೂರಿನ 72 ಸುಂದರಮೂರ್ತಿಗಳನ್ನು ಬ್ರಿಟಿಷರು ತಮ್ಮ ದೇಶದ ಮ್ಯೂಸಿಯಂನಲ್ಲಿ ಇಟ್ಟುಕೊಂಡಿದ್ದಾರೆ. ಇದನ್ನು ಮತ್ತೆ ರಾಜ್ಯಕ್ಕೆ ತರುವ ಬಗ್ಗೆ ಪ್ರಮಾಣಿಕವಾಗಿ  ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಹೇಳಿದರು

ಮೈಸೂರಿನ ಹಳೆಯ ಪಾರಂಪರಿಕ ಅಥವಾ ಹಳೆಯ ಕಟ್ಟಡಗಳನ್ನು ಸರ್ಕಾರ ಒಂದೇ ರಕ್ಷಿಸಲು ಸಾಧ್ಯವಿಲ್ಲ. ಅದರ ರಕ್ಷಣೆಗೆ ಜನರ ಸಹಕಾರ, ಸಹಾಯ ಅವಶ್ಯಕತೆ ಇದೆ. 25 ಸಾವಿರಕ್ಕೂ ಹೆಚ್ಚು ಸ್ಮಾರಕ ಇದೆ‌. ಇದರಲ್ಲಿ ಎಲ್ಲವೂ ರಕ್ಷಿಸಲಾಗುತ್ತಿಲ್ಲ. 500 ಸ್ಮಾರಕ ಗುರುತಿಸಿ ರಕ್ಷಿಸುವುದರ ಜೊತೆಗೆ ದತ್ತು ಕೊಡುವ ಪ್ರಕ್ರಿಯೇಯನ್ನು ಶೀಘ್ರದಲ್ಲೇ ತರುತ್ತೇವೆ ಎಂದರು.

ವಿದೇಶಗಲ್ಲಿರುವ ಭಾರತೀಯರಿಗೆ ತಮ್ಮ ಊರಿನ, ಗ್ರಾಮದ ಸ್ಮಾರಕಗಳ  ಅಭಿಮಾನದ ಆಸಕ್ತಿ ಇದೆ.‌ ಇದರಿಂದ ಅವರು ತಮ್ಮ ಗ್ರಾಮದ ಅಭಿಮಾನವಿದೆ. ಅಂತಹವರು ತಮ್ಮ ಊರಿನ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಆಸಕ್ತರಾಗಿದ್ದಾರೆ. ಹೀಗಾಗಿ ಸ್ಮಾರಕಗಳನ್ನು ಮುಂದಿನ ದಿನಗಳಲ್ಲಿ ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.

ಬೆಳಗಾವಿ, ಹುಬ್ಬಳಿ , ಬಳ್ಳಾರಿಯಿಂದ ಮೈಸೂರಿಗೆ ಬರುವ ಜನರು ಅರ್ಧ ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರುತ್ತಾರೆ. ಪ್ರವಾಸಿತಾಣಗಳು ಧಾರ್ಮಿಕವಾಗಿಯೂ ನೋಡುತ್ತಾರೆ. ಸೋಮನಾಥಪುರ ಹಳೆಬಿಡಿನ ಕ್ಷೇತ್ರಗಳಂತೂ ಎಲ್ಲರ ಆಕರ್ಷಣೆಗೆ ಒಳಗಾಗುತ್ತದೆ. ಕಾರಣ ಅಲ್ಲಿನ ಕಲೆ ಮತ್ತು ವಾಸ್ತು ಶಿಲ್ಪ. ಇಂತಹ ಪ್ರವಾಸಿ ಕ್ಷೇತ್ರಗಳನ್ನು ರಕ್ಷಿಸಬೇಕು. ಪ್ರವಾಸಿಗರಿಗೆ ತಿಳಿಸುವಂತಹ ಕೆಲಸ ಆಗಬೇಕು ಎಂದರು.

ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಇದೊಂದು ಒಳ್ಳೆಯ ಅವಕಾಶ. ಪ್ರವಾಸಿಕ್ಷೇತ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇವೆ. ಸ್ಮಾರಕಗಳನ್ನು ರಕ್ಷಿಸಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಶಾಸಕರು ಹಾಗೂ ಅಧಿಕಾರಿಗಳು ಗಮನಹರಿಸಬೇಕು.

ಕಾರ್ಯಕ್ರಮಕ್ಕೂ ಮುಂಚೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಜಿಲ್ಲೆಯಲ್ಲಿ ಕೇವಲ ಅರಮನೆ, ಜೂ ಮಾತ್ರವಲ್ಲದೇ 24ಕ್ಕೂ ಹೆಚ್ಚು ಪ್ರವಾಸೋಧ್ಯಮ ಕ್ಷೇತ್ರಗಳಿವೆ ಇವುಗಳನ್ನು ಜಗತ್ತಿಗೆ ತೋರಿಸಬೇಕು. ಮೈಸೂರು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂದು ತಿಳಿಸಬೇಕು. ದಸರಾ ಹಾಗೂ ಅರಮನೆ ಮಾತ್ರ ಪ್ರವಾಸೋಧ್ಯಮದ ಕೇಂದ್ರಬಿಂದುವಲ್ಲ. ತಲಕಾಡಿನ ಸೋಮನಾಥಪುರ ಸೇರಿದಂತೆ ಹಲವಾರು ತಾಣಗಳಿವೆ. ಅವುಗಳನ್ನು ಪ್ರವಾಸಿಗರಿಗೆ ತಲುಪುವಂತೆ ಮಾಡಬೇಕು ಎಂದರು.

ಪ್ರವಾಸೋಧ್ಯಮ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯಕೊಡಲು ಜಿಲ್ಲಾಡಳಿತ ಸಿದ್ದವಾಗಿದೆ. ಇದರ ಬಗ್ಗೆ ಜಿಲ್ಲಾಡಳಿತ ಮುಂದೆ ಇದೆ. ಸರ್ಕಾರದ ಬಳಿಯೂ ಇದರ ಬಗ್ಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿದ್ದೆವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ರವಿಶಂಕರ್, ದರ್ಶನ್ ದೃವನಾರಾಯಣ್, ಮಂಜೇಗೌಡ, ಜಿಲ್ಲಾಪಂಚಾತಿಯಿತ, ಪ್ರವಾಸೋದ್ಯ ಇಲಾಖೆಯಜಂಟಿ ನಿರ್ದೇಶಕರಾದ ಎಂ.ಕೆ ಸವಿತಾ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಗಾಯಿತ್ರಿ, ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು, ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಸೇರಿದಂತೆ ಇತರರು ಹಾಜರಿದ್ದರು.

ಹಿಂದಿನ ಲೇಖನಇಡಿಐಐ: 05 ಯೋಜನಾ ಅಧಿಕಾರಿಗಳು, ಯೋಜನಾ ಸಂಯೋಜಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನKAPL: 02 ಎಕ್ಸಿಕ್ಯೂಟಿವ್, ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ