ಮೈಸೂರು : ಉದ್ಯಮಿಯೊಬ್ಬರು ತಮ್ಮ ಕಾರ್ಖಾನೆ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಅರ್ಜುನ್ (೪೦) ಆತ್ಮಹತ್ಯೆಗೆ ಶರಣಾದ ಉದ್ಯಮಿ. ಅನಾರೋಗ್ಯದಿಂದ ಬಳಲುತ್ತಿದ್ದ ಉದ್ಯಮಿ ಅರ್ಜುನ್ ತಮ್ಮ ಕಾರ್ಖಾನೆ ಸಮೀಪ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅರ್ಜುನ್ ಅವರು ಮಹಾಜನ ಕಾಲೇಜು ಸಂಸ್ಥಾಪಕರಾದ ದಿ.ವಾಸುದೇವ ಮೂರ್ತಿ ಕುಟುಂಬದ ಕುಡಿ ಆಗಿದ್ದಾರೆ. ಅವರು, ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಎಸ್.ಎಸ್.ಇಂಡಸ್ಟ್ರೀಸ್ ಎಂಬ ಕಾರ್ಖಾನೆ ನಡೆಸುತ್ತಿದ್ದರು. ಈ ಮಧ್ಯೆ ಹಲವಾರು ದಿನಗಳಿಂದ ಅರ್ಜುನ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮನೆಯಿಂದ ಬಂದಿದ್ದ ಅರ್ಜುನ್ ತಮ್ಮ ಎಸ್.ಎಸ್.ಇಂಡಸ್ಟ್ರೀಸ್ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಂಜಾನೆ ಮನೆಯಲ್ಲಿ ಅರ್ಜುನ್ ಕಾಣಿಸದಿದ್ದಾಗ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅರ್ಜುನ್ ಮನೆಯಿಂದ ಹೊರಗೆ ತೆರಳಿರುವುದು ಕಂಡುಬಂದಿದೆ. ಇದಾದ ಕೆಲ ಸಮಯದ ಬಳಿಕ ಅರ್ಜನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














