ಮನೆ ಸ್ಥಳೀಯ ಮೈಸೂರು: ದಂಪತಿ ಅನುಮಾನಾಸ್ಪದ ಸಾವು

ಮೈಸೂರು: ದಂಪತಿ ಅನುಮಾನಾಸ್ಪದ ಸಾವು

0

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿರುವ ಮನೆಯೊಂದರಲ್ಲಿ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

Join Our Whatsapp Group

ಪ್ರಕಾಶ್(51) ಮತ್ತು ಪತ್ನಿ ಯಶೋಧ(48) ಮೃತರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈವರೆಗೂ ಪತಿ ಹಾಗೂ ಪತ್ನಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತು ಇಲ್ಲ. ಪತಿ ಪ್ರಕಾಶ್ ರಸ್ತೆ ಬದಿ ಕ್ಯಾಂಟೀನ್‌ ನಡೆಸುತ್ತಿದ್ದರೆ, ಪ್ರಕಾಶ್ ಪತ್ನಿ ಯಶೋಧ ಫ್ಲೋರ್‌ ಮಿಲ್ ನಡೆಸುತ್ತಿದ್ದರು.

ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.